ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತೀಕರಣದಿಂದ ಭದ್ರತೆಗೆ ಸವಾಲು: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಪಾದನೆ

Last Updated 29 ಆಗಸ್ಟ್ 2021, 9:51 IST
ಅಕ್ಷರ ಗಾತ್ರ

ಚೆನ್ನೈ: ಜಾಗತೀಕರಣ ದೇಶದ ಭದ್ರತೆಗೆ ಹೊಸ ಬೆದರಿಕೆಗಳನ್ನು ಒಡ್ಡುತ್ತಿದ್ದು, ಇಂಥ ಸವಾಲುಗಳನ್ನು ಎದುರಿಸಲು ಸನ್ನದ್ಧತೆ ಅಗತ್ಯ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಭಾನುವಾರ ಹೇಳಿದರು.

ಊಟಿ ಬಳಿಯ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸರ್ವೀಸಸ್ ಸ್ಟಾಫ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಈ ಸುದೀರ್ಘ ಅವಧಿಯಲ್ಲಿ ಎದುರಾದ ಸವಾಲುಗಳನ್ನು ನಮ್ಮ ಭದ್ರತಾ ಪಡೆಗಳು ಮೆಟ್ಟಿ ನಿಂತಿವೆ’ ಎಂದರು.

‘ಜಾಗತೀಕರಣದಿಂದಾಗಿ ಮಿಲಿಟರಿ, ವಿದ್ಯುತ್, ವ್ಯಾಪಾರ, ಸಂವಹನ ಕ್ಷೇತ್ರಗಳಲ್ಲಿ ಆರ್ಥಿಕತೆ ಹಾಗೂ ರಾಜಕೀಯ ಸಮೀಕರಣಗಳಲ್ಲಿ ಭಾರಿ ಬದಲಾವಣೆಗಳಾಗಿವೆ. ಈ ಬದಲಾವಣೆಗಳೇ ಪ್ರತಿ ದೇಶದ ಭದ್ರತೆಗೆ ಸವಾಲೊಡ್ಡುತ್ತಿವೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಪಡೆದ ದಿನದಿಂದಲೂ ಕೆಲ ಶತ್ರು ರಾಷ್ಟ್ರಗಳು ಪರಿಸ್ಥಿತಿ ಲಾಭ ಪಡೆದು ದೇಶದಲ್ಲಿ ಅಸ್ಥಿರತೆಯನ್ನುಂಟು ಮಾಡಲು ಹವಣಿಸುತ್ತಲೇ ಇವೆ. ಇಂಥ ಪ್ರಯತ್ನಗಳಿಗೆ ನಮ್ಮ ರಕ್ಷಣಾ ಪಡೆಗಳು ದಿಟ್ಟ ಉತ್ತರ ನೀಡಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT