ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ದೇಣಿಗೆ: ಆರೋಪ ನಿರಾಕರಿಸಿದ ಆಲ್ಟ್‌ನ್ಯೂಸ್‌ 

Last Updated 4 ಜುಲೈ 2022, 13:08 IST
ಅಕ್ಷರ ಗಾತ್ರ

ನವದೆಹಲಿ: ಕಾನೂನು ಉಲ್ಲಂಘಿಸಿ ವಿದೇಶಿ ಮೂಲಗಳಿಂದ ದೇಣಿಗೆ ಪಡೆಯಲಾಗಿದೆ ಎಂಬ ದೆಹಲಿ ಪೊಲೀಸರ ಆರೋಪ ನಿರಾಕರಿಸಿರುವ ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಸಂಸ್ಥೆ,ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ಸಂಸ್ಥೆಯನ್ನು ಮುಚ್ಚಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ.

’ವಿದೇಶಿ ಮೂಲಗಳಿಂದ ದೇಣಿಗೆ ಸ್ವೀಕರಿಸಿದ್ದೇವೆ ಎಂದು ಆರೋಪಿಸಲಾಗಿದೆ. ಆದರೆ ನಾವು ಹಾಗೆ ಹಣ ಪಡೆಯಲು ಸಾಧ್ಯವಿಲ್ಲ. ಪೊಲೀಸರ ಆರೋಪ ಸುಳ್ಳು. ಮಹಮ್ಮದ್ ಜುಬೈರ್ ವೈಯಕ್ತಿಕ ಖಾತೆಗೂ ಹಣ ಜಮಾ ಆಗಿಲ್ಲ. ಸಂಗ್ರಹಿಸುವ ಎಲ್ಲಾ ದೇಣಿಗೆಗಳು ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ‘ ಎಂದು ಆಲ್ಟ್‌ ನ್ಯೂಸ್‌ ತನ್ನ ಟ್ವೀಟ್‌ನಲ್ಲಿ ಹೇಳಿಕೆ ಪೋಸ್ಟ್ ಮಾಡಿದೆ.

ಆಲ್ಟ್ ನ್ಯೂಸ್‌ನ ಅಡಿ ಕಾರ್ಯನಿರ್ವಹಿಸುವ ಪ್ರಾವ್ಡಾ ಮೀಡಿಯಾ,ವಿವಿಧ ವಹಿವಾಟು ಮೂಲಕ ಎರಡು ಲಕ್ಷ ರೂಪಾಯಿಗಳನ್ನು ಮೊಬೈಲ್ ಫೋನ್ ಸಂಖ್ಯೆ ಅಥವಾ ವಿದೇಶಗಳ ಐಪಿ ವಿಳಾಸ ಮೂಲಕ ಪಡೆದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT