ಭಾನುವಾರ, ಡಿಸೆಂಬರ್ 5, 2021
27 °C

Repeated ಹುಟ್ಟುಹಬ್ಬದ ದಿನದಂದೇ ಹೃದಯಾಘಾತದಿಂದ ಮೃತ ಪಟ್ಟ ಡಿಎಂಕೆಯ ಮಾಜಿ ಶಾಸಕ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಡಿಎಂಕೆಯ ಮಾಜಿ ಶಾಸಕ ವೀರಪಾಂಡಿ ಎ ರಾಜಾ ಅವರು 59ನೇ ಹುಟ್ಟುಹಬ್ಬದ ದಿನದಂದೇ ಶನಿವಾರ ಸೇಲಂನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮ್ಮ ದಿವಂಗತ ತಂದೆ ಮತ್ತು ಮಾಜಿ ಸಚಿವ ವೀರಪಾಂಡಿ ಎಸ್ ಅರ್ಮುಗಂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಸಂದರ್ಭ ಹೃದಯಾಘಾತವಾಗಿದ್ದು, ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರಾಜಾ ತಮ್ಮ ತಂದೆಯ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದ ನಂತರ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೆ, ಕರೆತರುವಾಗಲೇ ವೀರಪಾಂಡಿ ಎ ರಾಜಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ರಾಜಾ 2006ರಲ್ಲಿ ವೀರಪಾಂಡಿಯಿಂದ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಸೇಲಂ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1982ರಲ್ಲಿ ಡಿಎಂಕೆ ಸೇರಿದ ನಂತರ ಅವರು ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. 

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಸಚಿವರಾದ ಪಳನಿವೇಲ್ ತ್ಯಾಗರಾಜನ್, ಕೆ ಎನ್ ನೆಹರು, ಪೊನ್ಮುಡಿ ಮತ್ತು ಇತರ ಸಚಿವರು ಸಂತಾಪ ಸೂಚಿಸಿದ್ದಾರೆ. ಸಿಎಂ ಸ್ಟಾಲಿನ್ ದುಃಖಿತ ಕುಟುಂಬವನ್ನು ಭೇಟಿಯಾಗಿ ಧೈರ್ಯ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು