ಭಾನುವಾರ, ಆಗಸ್ಟ್ 14, 2022
24 °C

‘ಒಕ್ಕೂಟ ಸರ್ಕಾರ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ ದೇವೇಗೌಡರು: ಪ್ರಶಂಸೆ

ಪ್ರಜಾವಾಣಿ ವೆಬ್‌ಡೆಸ್ಕ್‌ ‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಮ್ಮು ಕಾಶ್ಮೀರದ ನಾಯಕರೊಂದಿಗೆ ನರೇಂದ್ರ ಮೋದಿ ಅವರು ನಡೆಸುತ್ತಿರುವ ಸಭೆಗಳ ಕುರಿತು ಟ್ವೀಟ್‌ ಮಾಡುವ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸರ್ಕಾರ ಎಂಬುದರ ಬದಲಿಗೆ ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸಿರುವುದು ಟ್ವಿಟರ್‌ನಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರ ಎಂಬುದರ ಬದಲಿಗೆ ಒಕ್ಕೂಟ ಸರ್ಕಾರ ಎಂದು ಸಂಬೋಧಿಸಲು, ಪತ್ರಗಳಲ್ಲಿ ಉಲ್ಲೇಖಿಸಲು ನೆರೆಯ ತಮಿಳುನಾಡಿನ ಡಿಎಂಕೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ವಿಚಾರ ದಕ್ಷಿಣ ಭಾರತದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿರುವುದೂ ಅಲ್ಲದೆ, ಹಲವರು ‘ಒಕ್ಕೂಟ ಸರ್ಕಾರ‘ ಎಂಬ ಪ್ರಯೋಗ ಆರಂಭಿಸಿದ್ದಾರೆ.

ಇದೇ ವೇಳೆಯಲ್ಲೇ ಮಾಜಿ ಪ್ರಧಾನಮಂತ್ರಿಯೂ ಆದ ದೇವೇಗೌಡರು ‘ಒಕ್ಕೂಟ ಸರ್ಕಾರ’ ಎಂಬ ಪ್ರಯೋಗ ಮಾಡಿರುವುದು ಮೆಚ್ಚುಗೆ ಗಳಿಸಿಕೊಂಡಿದೆ.

ಏನು ಟ್ವೀಟ್‌ ಮಾಡಿದ್ದರು ದೇವೇಗೌಡರು?

‘ಒಕ್ಕೂಟ ಸರ್ಕಾರ (Union Government) ಮತ್ತು ಜಮ್ಮು ಕಾಶ್ಮೀರದ ನಾಯಕರ ನಡುವಿನ ಸಂವಾದವು ಉತ್ತಮ ರೀತಿಯಲ್ಲಿ ನಡೆದಿರುವುದು ತಿಳಿದು ನನಗೆ ಸಂತೋಷವಾಗಿದೆ. ರಾಜ್ಯದ ಸ್ಥಾನಮಾನ ಪುನರ್‌ಸ್ಥಾಪನೆ, ವಿಧಾನಸಭಾ ಚುನಾವಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟವಾದ ವಿಚಾರ ವಿನಿಮಯ ಸಭೆಯಲ್ಲಿ ನಡೆದಿದೆ. ಜಮ್ಮು ಕಾಶ್ಮೀರದ ಜನ ಶಾಂತಿ, ಪ್ರಗತಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಲು ಅರ್ಹರು,' ಎಂದು ದೇವೇಗೌಡರು ಟ್ವೀಟ್‌ ಮಾಡಿದ್ದರು.

ಟ್ವಿಟರ್‌ನಲ್ಲಿ ಬಂದ ಪ್ರತಿಕ್ರಿಯೆಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು