ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುರ್ಕಿನ ಫಾಸೊದಲ್ಲಿ ಜಿಹಾದಿಗಳ ದಾಳಿ: 47 ಮಂದಿ ಸಾವು

Last Updated 19 ಆಗಸ್ಟ್ 2021, 12:01 IST
ಅಕ್ಷರ ಗಾತ್ರ

ಕ್ವಾಗಡೊಗೌ: ಪಶ್ಚಿಮ ಆಫ್ರಿಕಾದ ರಾಷ್ಟ್ರ ಬುರ್ಕಿನೊ ಫಾಸೊದಲ್ಲಿ ಶಂಕಿತ ಜಿಹಾದಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 30 ನಾಗರಿಕರೂ ಸೇರಿ 47 ಮಂದಿ ಮೃತಪಟ್ಟಿದ್ದು, ಅಧ್ಯಕ್ಷರು ಮೂರು ದಿನಗಳ ರಾಷ್ಟ್ರೀಯ ಶೋಕ ಘೋಷಿಸಿದ್ದಾರೆ.

ಮೃತರಲ್ಲಿ 14 ಮಂದಿ ಸೈನಿಕರು ಸೇರಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ 58 ಉಗ್ರರು ಸತ್ತಿದ್ದಾರೆ. 19 ಜನರು ಗಾಯಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಚಟುವಟಿಕೆಗಳು ನಡೆದಿವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಕಳೆದ ಎರಡು ವಾರಗಳಲ್ಲಿ ನಡೆದ ಮೂರನೇ ದಾಳಿ ಪ್ರಕರಣ ಇದಾಗಿದೆ. ಈ ಹಿಂದೆ, ಆಗಸ್ಟ್ 4ರಂದು ನಡೆದಿದ್ದ ಪ್ರಮುಖ ದಾಳಿಯಲ್ಲಿ 11 ನಾಗರಿಕರು ಸೇರಿ ಒಟ್ಟು 30 ಜನರು ಸತ್ತಿದ್ದರು. ಜೂನ್‌ 4–5ರಂದು ಸೊಲ್ಹಾನ್‌ ಗ್ರಾಮದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ 132 ಜನರು ಸತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT