ಶುಕ್ರವಾರ, ಮೇ 20, 2022
24 °C
ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಒತ್ತಾಯ

ದೇಶಿಯ ಕಂಪನಿ, ಸೇವೆಗೆ ಆದ್ಯತೆ ನೀಡುವ ನಿಯಮ ರೂಪಿಸಿ: ಸಂಸದ ವಿನಯ್ ಸಹಸ್ರಬುದ್ಧೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆರಿಕದ ಹೊಸ ಸರ್ಕಾರ ‘ದೇಶಿಯ ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳಿಗೆ‘ ಆದ್ಯತೆ ನೀಡುತ್ತಿ ರುವ ಮಾದರಿಯಲ್ಲೇ ಭಾರತದಲ್ಲೂ ‘ಎಲ್ಲ ಒಪ್ಪಂದ, ವ್ಯವಹಾರಗಳಲ್ಲೂ ದೇಶಿಯ ಕಂಪನಿಗಳ ಉತ್ಪನ್ನಗಳು ಮತ್ತು ಸೇವೆಗಳಿಗೆ‘ ಆದ್ಯತೆ ನೀಡುವಂತೆ ನಿಯಮ ರೂಪಿಸಬೇಕು ಎಂದು ಸಂಸದರು ಬುಧವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿನಯ್ ಪಿ ಸಹಸ್ರಬುದ್ಧೆ, ‘ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು, ‘ಅಮೆರಿಕದ ಕಂಪನಿಗಳು ತಯಾರಿಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ನಮ್ಮ ದೇಶದಲ್ಲೂ ಇದೇ ಮಾದರಿ ಅನುಸರಿಸಬೇಕು‘ ಎಂದರು.

‘ಅನುಭವ ಹಾಗೂ ಇನ್ನಿತರ ಅರ್ಹತಾ ಮಾನದಂಡಗಳಿಂದಾಗಿ ಸ್ಥಳೀಯ ಸಲಹಾ ಸಂಸ್ಥೆಗಳಿಗೆ ಸಿಗಬೇಕಾದ ಆದ್ಯತೆ ವಿದೇಶಿ ಸಂಸ್ಥೆಗಳ ಪಾಲಾಗುತ್ತಿದೆ. ಇದರಿಂದ ಸ್ಥಳೀಯ ಕಂಪನಿಗಳು ನಷ್ಟ ಅನುಭವಿಸುತ್ತಿವೆ‘ ಎಂದು ಅವರು ತಿಳಿಸಿದರು.

‘ಬೃಹದಾಕಾರವಾಗಿ ಬೆಳೆದಿರುವ ಕನ್ಸಲ್ಟೆನ್ಸಿ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಪ್ರಾಬಲ್ಯ ಹೆಚ್ಚಾಗಿದೆ. ಕೈಗಾರಿಕಾ ಸಂಘಟನೆಯ ಅಸೋಚಾಮ್ ಪ್ರಕಾರ, ಈ ಕನ್ಸಲ್ಟೆನ್ಸಿ ಕಂಪನಿಗಳು 2020ರ ವಾರ್ಷಿಕ ವಹಿವಾಟು ₹27 ಸಾವಿರ ಕೋಟಿ. ಈ ಹಿನ್ನೆಲೆಯಲ್ಲಿ ದೇಶಿಯ ಕಂಪನಿಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ‘ ಎಂದು ಸಹಸ್ರಬುದ್ದೆ ಹೇಳಿದ್ದಾರೆ.

‘ಸಾರ್ವಜನಿಕ ನೀತಿ ಎಂಬುದು ಒಂದು ಆಕರ್ಷಕ ಕ್ಷೇತ್ರವಾಗಿದ್ದು, ಆ ಕ್ಷೇತ್ರದ ವ್ಯಾಪ್ತಿಗೆ ಬರುವ ಕನ್ಸಲ್ಟೆನ್ಸಿ ಕಂಪನಿಗಳಲ್ಲಿ ಶೇ 80ರಷ್ಟು ಪದವೀಧರರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ದೇಶಿಯ ಕನ್ಸಲ್ಟೆನ್ಸಿ ಕಂಪನಿಗೆ ಆದ್ಯತೆ ನೀಡಬೇಕು ಎಂಬ ನಿಯಮವನ್ನು ರೂಪಿಸುವುದು ಅಗತ್ಯವಾಗಿದೆ‘ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು