ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜೆಐ ತಾಯಿಗೆ ₹2.5 ಕೋಟಿ ವಂಚನೆ: ಆರೋಪಿಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

Last Updated 17 ಡಿಸೆಂಬರ್ 2020, 2:33 IST
ಅಕ್ಷರ ಗಾತ್ರ

ನಾಗ್ಪುರ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶರದ್‌ ಬೊಬಡೆ ಅವರ ತಾಯಿಗೆ ವಂಚಿಸಿದ ಆರೋಪದಡಿ ಪೊಲೀಸರ ವಶದಲ್ಲಿರುವ ತಪಸ್‌ ಘೋಷ್‌ ಬಂಧನ ಅವಧಿಯನ್ನು ಡಿಸೆಂಬರ್‌ 21ರ ವರೆಗೆ ವಿಸ್ತರಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.

ಕಳೆದ ವಾರ ಬಂಧಿಸಲ್ಪಟ್ಟ ತಪಸ್ ಘೋಷ್ (49) ಅವರ ಕಸ್ಟಡಿ ಅವಧಿ ವಿಸ್ತರಣೆಗಾಗಿ ಪೊಲೀಸರ ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ಮೊರೆಹೋಗಿತ್ತು.

ಆರೋಪಿ ತಪಸ್‌ ಘೋಷ್‌ ಎಂಬುವವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿತ್ತು. ಡಿಸಿಪಿ ವಿನಿತಾ ಸಾಹು ಅವರ ನೇತೃತ್ವದಲ್ಲಿ ನಾಗ್ಪುರ ಪೊಲೀಸರ ವಿಶೇಷ ತನಿಖಾ ತಂಡವು ತನಿಖೆ ನಡೆಸುತ್ತಿದೆ.

'ಆಕಾಶವಾಣಿ ಸ್ಕ್ವ್ಯಾರ್‌ ಸಮೀಪ ಬೊಬಡೆ ಕುಟುಂಬವು ‘ಸೀಡನ್‌ ಲಾನ್‌’ ಆಸ್ತಿಯನ್ನು ಹೊಂದಿದ್ದು, ಇದನ್ನು ಹಲವು ಕಾರ್ಯಕ್ರಮಕ್ಕಾಗಿ ಬಾಡಿಗೆ ನೀಡಲಾಗುತ್ತಿದೆ. ತೊಂಬತ್ತರ ವಯಸ್ಸಿನ ಮುಕ್ತಾ ಬೊಬಡೆ ಅವರು ಇದರ ಮಾಲೀಕರಾಗಿದ್ದು, ಕುಟುಂಬವು, ಫ್ರೆಂಡ್ಸ್‌ ಕಾಲೊನಿಯ ಘೋಷ್‌ ಅವರನ್ನು ಆಸ್ತಿ ನೋಡಿಕೊಳ್ಳಲು ನೇಮಿಸಿತ್ತು' ಎಂದು ತಿಳಿದುಬಂದಿದೆ.

'ಕಳೆದ ಹತ್ತು ವರ್ಷದಿಂದ ಆಸ್ತಿಯನ್ನು ನೋಡಿಕೊಳ್ಳುತ್ತಿರುವ ಘೋಷ್‌, ಅಲ್ಲಿ ನಡೆದ ಕಾರ್ಯಕ್ರಮಗಳ ಹಣಕಾಸು ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದರು. ವೃದ್ಧಾಪ್ಯದಲ್ಲಿರುವ ಮುಕ್ತಾ ಬೊಬಡೆ ಅವರಿಗೆ ಬಾಡಿಗೆಯ ಮೊತ್ತದಲ್ಲಿ ವಂಚನೆ ಎಸಗುತ್ತಿದ್ದರು. ಘೋಷ್‌ ಹಾಗೂ ಅವರ ಪತ್ನಿ, ಸಂಗ್ರಹವಾದ ಎಲ್ಲ ಬಾಡಿಗೆ ಮೊತ್ತವನ್ನು ಬೊಬಡೆ ಕುಟುಂಬಕ್ಕೆ ಸಲ್ಲಿಸುತ್ತಿರಲಿಲ್ಲ. ₹2.5 ಕೋಟಿಗಿಂತ ಅಧಿಕ ವಂಚನೆ ಎಸಗಿರುವ ಸಂಶಯವಿದ್ದು ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT