ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಮಾರ್ಚ್‌ 8ರಂದು ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

Last Updated 1 ಮಾರ್ಚ್ 2023, 11:45 IST
ಅಕ್ಷರ ಗಾತ್ರ

ಜೈಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್‌ 8ರಂದು ರಾಜಸ್ಥಾನದಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಸಾಮಾನ್ಯ ಹಾಗೂ ಫಾಸ್ಟ್‌ ಬಸ್‌ ಸೇರಿದಂತೆ ರಾಜಸ್ಥಾನದ ಸಾರಿಗೆ ನಿಗಮಕ್ಕೆ ಸೇರಿದ ಎಲ್ಲಾ ಬಸ್‌ಗಳಲ್ಲೂ ಈ ಸೌಲಭ್ಯ ಇರಲಿದ್ದು, ಮಾರ್ಚ್‌ 8ರಂದು ಸುಮಾರು 8.50 ಲಕ್ಷ ಮಹಿಳೆಯರು ಪ್ರಯಾಣಿಸುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಅಧಿಕೃತ ಹೇಳಿಕೆ ಪ್ರಕಾರ, ಬೊಕ್ಕಸಕ್ಕೆ ಸುಮಾರು ₹7.50 ಕೋಟಿ ಹೊರೆಯಾಗಲಿದೆ.

ನಿಗಮದ ಸಾಮಾನ್ಯ ಬಸ್‌ಗಳಲ್ಲಿನ ಪ್ರಯಾಣ ದರದಲ್ಲಿ ಮಹಿಳೆಯರಿಗೆ ರಿಯಾಯಿತಿಯನ್ನು ಶೇಕಡ 50ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಅನುಮೋದಿಸಿದ್ದಾರೆ.

ಪ್ರಸ್ತುತ ಸಾಮಾನ್ಯ ಬಸ್‌ಗಳಲ್ಲಿ ಶೇ 30ರಷ್ಟು ರಿಯಾಯಿತಿ ಇದೆ. ಹೆಚ್ಚಿನ ವಿನಾಯಿತಿ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಕ್ರಮದಿಂದ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿಯಾಗಿ ವಾರ್ಷಿಕ ಸುಮಾರು 3.50 ಕೋಟಿ ಆರ್ಥಿಕ ಹೊರೆ ಬೀಳಲಿದೆ.
ಗೆಹಲೋತ್‌ ಅವರು 2023-24ರ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ರಿಯಾಯಿತಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT