ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕಲ್ಯಾಣದ ಪ್ರತಿಪಾದಿಸಿದ ಮೋಹನ್ ಭಾಗವತ್

Last Updated 27 ನವೆಂಬರ್ 2022, 16:21 IST
ಅಕ್ಷರ ಗಾತ್ರ

ಪಟ್ನಾ : ವಿಭಿನ್ನಸಿದ್ಧಾಂತಗಳನ್ನು ಹೊಂದಿರುವ ಜನರು ಸಾಮಾನ್ಯ ಉದ್ದೇಶಕ್ಕಾಗಿ ಹೇಗೆ ಒಗ್ಗೂಡಬಹುದು ಎಂಬುದನ್ನುಸ್ವಾತಂತ್ರ್ಯ ಹೋರಾಟಗಾರರು ತೋರಿಸಿಕೊಟ್ಟಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು.

ಸರನ್ ಜಿಲ್ಲೆಯ ಮಲ್ಖಾಚಕ್ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಮಾತನಾಡಿದ ಭಾಗವತ್,‘ವಿಶ್ವಶಕ್ತಿ ಎಂಬ ಕಲ್ಪನೆಯೇ ಸರಿಯಲ್ಲ. ಇಂತಹ ಮಹಾತ್ವಾಕಾಂಕ್ಷೆ ಫಲವೇ ರಷ್ಯಾ–ಉಕ್ರೇನ್ ಯುದ್ದ. ಭಾರತದ ಪ್ರಾಚೀನ ನಾಗರಿಕತೆಯು ಎಂದಿಗೂ ವಿಶ್ವ ಕಲ್ಯಾಣವನ್ನೇ ಪ್ರತಿಪಾದಿಸುವುದರಿಂದ, ಅದು ವಿಶ್ವಶಕ್ತಿಯ ಮಹತ್ವಾಕಾಂಕ್ಷೆಯನ್ನು ಹೊಂದಲು ಸಾಧ್ಯವಿಲ್ಲ.’ ಎಂದು ಹೇಳಿದರು.

ಇದೇ ವೇಳೆ ಭಾಗವತ್ ಅವರು ಪತ್ರಕರ್ತ ರವೀಂದ್ರ ಕುಮಾರ್ ಅವರ ‘ಸ್ವತಂತ್ರ ಆಂದೋಲನ್ ಕಿ ಬಿಖ್ರಿ ಕಡಿಯಾನ್’ ಎಂಬ ಪುಸ್ತಕ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT