ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಸ್ಮರಣಾರ್ಥ ಪತ್ರಿಕೆಯಲ್ಲಿ ಸಾವರ್ಕರ್ ಕುರಿತಾದ ವಿಶೇಷ ಸಂಚಿಕೆ

Last Updated 17 ಜುಲೈ 2022, 12:58 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಷನಲ್‌ ಮೆಮೋರಿಯಂ ಆ್ಯಂಡ್‌ ಮ್ಯೂಸಿಯಂ, ಮಹಾತ್ಮ ಗಾಂಧಿ ಸ್ಮರಣಾರ್ಥ ಹೊರತರುತ್ತಿರುವ 'ಅಂತಿಮ್‌ ಜನ್‌' ಮಾಸಪತ್ರಿಕೆಯಲ್ಲಿ ಹಿಂದುತ್ವ ಮುಖಂಡ ವಿನಾಯಕ ದಾಮೋದರ ಸಾವರ್ಕರ್‌ ಅವರಿಗೆ ಮೀಸಲಿಟ್ಟು ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುತ್ತಿದೆ.

ಸಾವರ್ಕರ್‌ ಅವರನ್ನು 'ಮಹಾನ್‌ ದೇಶಭಕ್ತ' ಎಂದು ಶ್ಲಾಘಿಸಿದ್ದು, 'ಇತಿಹಾಸದಲ್ಲಿ ಸಾವರ್ಕರ್‌ ಅವರ ಸ್ಥಾನ ಗಾಂಧಿ ಅವರಿಗಿಂತ ಕಡಿಮೆಯಿಲ್ಲ' ಎಂದು ಉಲ್ಲೇಖಿಸಲಾಗಿದೆ.

ಜೂನ್‌ ತಿಂಗಳ ಪ್ರತಿಯನ್ನುಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ (ಜಿಎಸ್‌ಡಿಎಸ್‌)ಹಿಂದಿ ಭಾಷೆಯಲ್ಲಿ ಹೊರತರುತ್ತಿದೆ. ಈ ಪ್ರತಿಷ್ಠಿತ ಸಂಸ್ಥೆಯು ಸಂಸ್ಕೃತಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಅಧ್ಯಕ್ಷರಾಗಿದ್ದಾರೆ.

ಸಾವರ್ಕರ್‌ ಅವರ ಸಚಿತ್ರವಿರುವ ಮುಖಪುಟವಿದ್ದು, ಧಾರ್ಮಿಕ ಸಹಿಷ್ಣುತೆಗೆ ಸಂಬಂಧಿಸಿ ಮಹಾತ್ಮ ಗಾಂಧಿ, ಹಿಂದುತ್ವಕ್ಕೆ ಸಂಬಂಧಿಸಿ ಸಾವರ್ಕರ್‌ ಹಾಗೂ ಸಾವರ್ಕರ್‌ ಅವರ ಕುರಿತಾಗಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹಳೆಯ ಲೇಖನಗಳಿಗೆ ಪ್ರತಿರೂಪ ನೀಡಲಾಗಿದೆ.

ಈ ಸಂಸ್ಥೆಯು ತೀಸ್‌ ಜನವರಿ ಮಾರ್ಗ್‌ (ಅಲ್ಬುಕರ್ಕ್‌ ರಸ್ತೆ)ನಲ್ಲಿರುವ ಬಿರ್ಲಾ ಹೌಸ್‌ನಲ್ಲಿದೆ. ಇದು 1948ರ ಜನವರಿ 30ರಂದು ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್‌ ಗೋಡ್ಸೆ ಹತ್ಯೆ ಮಾಡಿದ ಸ್ಥಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT