ಸೋಮವಾರ, ಅಕ್ಟೋಬರ್ 3, 2022
24 °C

ಉದ್ಯಮಿ ಗೌತಮ್‌ ಅದಾನಿಗೆ ಝೆಡ್‌ ಶ್ರೇಣಿಯ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅತಿ ಗಣ್ಯ ವ್ಯಕ್ತಿಗಳಿಗೆ ನೀಡುವ ‘ಝೆಡ್‌’ ಶ್ರೇಣಿಯ ಭದ್ರತೆಯನ್ನು ಉದ್ಯಮಿ, ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ ಅವರಿಗೆ ಕೇಂದ್ರ ಸರ್ಕಾರವು ನೀಡಿದೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ(ಸಿಆರ್‌ಪಿಎಫ್‌) ಗಣ್ಯ ವ್ಯಕ್ತಿ ಭದ್ರತಾ ವಿಭಾಗ ಈ ಹೊಣೆ ಹೊರಲಿದೆ ಎಂದು ಬುಧವಾರ ಅಧಿಕೃತ ಮೂಲಗಳು ತಿಳಿಸಿವೆ.  

ಅದಾನಿ ಅವರಿಗೆ ನೀಡಲಾಗಿರುವ ಭದ್ರತೆಯು ಪಾವತಿ ಆಧಾರದ್ದಾಗಿದೆ. ತಿಂಗಳಿಗೆ 15ರಿಂದ 20 ಲಕ್ಷದವರೆಗೆ ವೆಚ್ಚ ತಗುಲುವ ನಿರೀಕ್ಷೆ ಇದೆ. ಕೇಂದ್ರೀಯ ಭದ್ರತಾ ಸಂಸ್ಥೆ ತಯಾರಿಸಿದ್ದ ಬೆದರಿಕೆ ಗ್ರಹಿಕೆ ವರದಿ ಆಧಾರದಲ್ಲಿ ಅವರಿಗೆ ‘ಝೆಡ್‌’ ಶ್ರೇಣಿಯ ಭದ್ರತೆ ನೀಡಲಾಗಿದೆ. ಸಿಆರ್‌ಪಿಎಫ್‌ ಕಮಾಂಡೊಗಳ ತಂಡ ಈಗಾಗಲೇ ಅದಾನಿ ಜೊತೆ ಇದೆ ಎಂದು ಹೇಳಲಾಗಿದೆ. 

ಉದ್ಯಮಿ ಮುಖೇಶ್‌ ಅಂಬಾನಿ ಅವರಿಗೆ 2013ರಲ್ಲಿ ‘ಝೆಡ್‌ ಪ್ಲಸ್‌’ ಶ್ರೇಣಿಯ ಭದ್ರತೆ ನೀಡಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು