ಸೋಮವಾರ, ಮೇ 16, 2022
28 °C

ಕೋವಿಡ್‌: ಜರ್ಮನಿಯಲ್ಲಿ ಒಂದೇ ದಿನ 50,196 ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಲಿನ್‌ (ಎಎಫ್‌ಪಿ): ಜರ್ಮನಿಯಲ್ಲಿ ಗುರುವಾರ ದಾಖಲೆ ಸಂಖ್ಯೆಯಲ್ಲಿ ಅಂದರೆ 50,196 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಪಿಡುಗು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಜರ್ಮನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿಯನ್ನು ದಾಟಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ.

‘ಇದೊಂದು ನಾಟಕೀಯ ಬೆಳವಣಿಗೆ. ಕೋವಿಡ್ ಪಿಡುಗು ಹೊಸರೂಪದಲ್ಲಿ ಮರಳುತ್ತಿದೆ’ ಎಂದು ನಿರ್ಗಮಿತ ಚಾನ್ಸಲರ್‌ ಅಂಗೆಲಾ ಮಾರ್ಕೆಲ್‌ ಅವರ ಹೇಳಿಕೆ ಆಧರಿಸಿ ಅವರ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಆಡಳಿತಗಳು ಪಿಡುಗು ತಡೆಗೆ ಕ್ರಮವಹಿಸಬೇಕು ಎಂದು ಹೇಳಿದ್ದಾರೆ. ಸೋಂಕು ಪ್ರಕರಣಗಳು ಹೆಚ್ಚಿದಂತೇ ಆಸ್ಪತ್ರೆಗಳ ಮೇಲಿನ ಒತ್ತಡವು ಹೆಚ್ಚಿದೆ. ಲಸಿಕೆ ಅಭಿಯಾನ ಪರಿಣಾಮಕಾರಿ ಆಗಿಲ್ಲದೇ ಇರುವುದೇ ಈ ಸ್ಥಿತಿಗೆ ಕಾರಣ ಎಂದು ದೂಷಿಸಲಾಗುತ್ತಿದೆ.

ಸದ್ಯ, ಜರ್ಮನಿಯಲ್ಲಿ ಒಟ್ಟಾರೆ ಲಸಿಕೆ ಪಡೆದವರ ಪ್ರಮಾಣ ಶೇ 67ರಷ್ಟಿದೆ. ಕೋವಿಡ್‌ ಪಿಡುಗು ಆರಂಭವಾದಾಗಿನಿಂದ ಸುಮಾರು 49 ಲಕ್ಷ ಜನರು ಸೋಂಕು ಪೀಡಿತರಾಗಿದ್ದಾರೆ.

ಸಾಕ್ಸೊನಿ, ಬರ್ಲಿನ್‌ ರಾಜ್ಯಗಳಲ್ಲಿ ಸೋಂಕು ಪ್ರಮಾಣ ಹೆಚ್ಚಿದ್ದು, ಲಸಿಕೆ ಪಡೆಯದ ನಾಗರಿಕರನ್ನು ಗುರಿಯಾಗಿಸಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ರೆಸ್ಟೋರಂಟ್‌ಗಳು, ಬಾರ್‌ಗಳು, ಕ್ರೀಡಾನಿಲಯಗಳಿಗೆ ಇವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು