ಭಾನುವಾರ, ನವೆಂಬರ್ 27, 2022
26 °C

ದೇಶದ ಅತ್ಯಂತ ಕಲುಷಿತ ನಗರ ಗಾಜಿಯಾಬಾದ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ ದೇಶದ ಅತ್ಯಂತ ಕಲುಷಿತ ನಗರ ಎನಿಸಿದೆ.

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಶ್ರೇಣೀಕೃತ ಸ್ಪಂದನ ಕ್ರಿಯಾಯೋಜನೆ (ಜಿಆರ್‌ಎಪಿ–ಗ್ರಾಪ್‌) ರೂಪಿಸಲಾಗಿದೆ. ಆದರೆ, ಅದರ ನಿಯಮಗಳು ಗಾಜಿಯಾಬಾದ್‌ನಲ್ಲಿ ಸೂಕ್ತ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಅತ್ಯಂತ ಕಲುಷಿತ ನಗರವೆಂದು ಗುರುತಿಸಲಾಗಿದೆ ಎಂದು ವರದಿಗಳು ಪ್ರಕಟವಾಗಿವೆ.

ಉತ್ತರ ಪ್ರದೇಶದ ಪಶ್ಚಿಮಕ್ಕಿರುವ ದೊಡ್ಡ ನಗರವಾದ ಗಾಜಿಯಾಬಾದ್‌ನಲ್ಲಿ ಬುಧವಾರ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 248 ದಾಖಲಾಗಿತ್ತು. ಮಂಗಳವಾರ ನಗರದ ಎಕ್ಯೂಐ ಸರಾಸರಿ 162 ರಷ್ಟಿತ್ತು. ನಗರದ ಪ್ರಮುಖ ಪ್ರದೇಶವಾಗಿರುವ ಲೋನಿಯಲ್ಲಿ ಎಕ್ಯೂಐ ಮತ್ತಷ್ಟು ಕಳಪೆ (293) ಇತ್ತು.

ಜಿಆರ್‌ಎಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಲೋನಿಯ ಮುನಿಸಿಪಲ್‌ ಕೌನ್ಸಿಲ್‌ ಅಧಿಕಾರಿಗಳಿಗೆ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸೂಚಿಸಿದೆ. ದಸರಾ ಸಂದರ್ಭದಲ್ಲಿ ನಡೆದ 'ರಾವಣ ದಹನ'ದ ಬಳಿಕ ಎನ್‌ಸಿಆರ್‌ನಲ್ಲಿ ವಾಯಮಾಲಿನ್ಯ ಪ್ರಮಾಣ ಏರಿಕೆಯಾಗಿರುವ ಬಗ್ಗೆ ಸಿಪಿಸಿಬಿ ಕಳವಳ ವ್ಯಕ್ತಪಡಿಸಿದೆ.

ಮಳೆಯಾದರೆ ಎಕ್ಯೂಐ ಸಾಧಾರಣ ಸ್ಥಿತಿಗೆ ಬರುವ ಸಾಧ್ಯತೆ ಇದೆ.

ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಗುರುಗ್ರಾಮ (ಎಕ್ಯೂಐ–238) ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಗ್ರೇಟರ್‌ ನೋಯಿಡಾ (ಎಕ್ಯೂಐ–234) ಇದೆ.

'ಗಾಳಿಯ ವೇಗ ಕಡಿಮೆ ಇರುವುದು. ರಸ್ತೆಗಳ ಮೇಲೆ ನೀರು ಬೀಳದಿರುವುದು ಹಾಗೂ ವಾಹನಗಳ ಹೊಗೆ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ' ಎಂದು ಸಿಪಿಸಿಬಿ ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಕಳೆದ ಐದು ದಿನಗಳಲ್ಲಿ ಎಕ್ಯೂಐ ಕ್ರಮವಾಗಿ 210, 207, 138, 162 ಹಾಗೂ 248 ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು