ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಾಂಗ್ರೆಸ್ ಚೊಡೊ' ಘೋಷಣೆ ಮೊಳಗಿಸಿ ಬಿಜೆಪಿಗೆ ಹಾರಿದ ಗೋವಾದ 8 ಕಾಂಗ್ರೆಸ್ ಶಾಸಕರು

Last Updated 14 ಸೆಪ್ಟೆಂಬರ್ 2022, 9:19 IST
ಅಕ್ಷರ ಗಾತ್ರ

ಪಣಜಿ: ಗೋವಾದ ಎಂಟು ಕಾಂಗ್ರೆಸ್ ಶಾಸಕರು ಬುಧವಾರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಶಾಸಕರಿಗೆ ಕೇಸರಿ ಬಾವುಟ ನೀಡಿ ಸ್ವಾಗತಿಸಲಾಯಿತು.

ಶಾಸಕರಾದ ಮೈಕಲ್ ಲೋಬೊ, ಮಾಜಿ ಸಿಎಂ ದಿಗಂಬರ್ ಕಾಮತ್, ದಿಲಿಹಾ ಲೋಬೊ, ರಾಜೇಶ್ ಪಾಲ್‌ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ ಅಮೋಂಕರ್, ಅಲೆಕ್ಸೊ ಸಿಕ್ವೇರಾ, ರುಡಾಲ್ಫ್ ಫರ್ನಾಂಡಿಸ್ ಬಿಜೆಪಿ ಸೇರುತ್ತಿದ್ದಾರೆ.ಇದರೊಂದಿಗೆ ಗೋವಾ ಕಾಂಗ್ರೆಸ್‌ನಲ್ಲಿ ಇದೀಗ ಮೂವರೇ ಶಾಸಕರು ಉಳಿದಂತಾಗಿದೆ.

‘ಕಾಂಗ್ರೆಸ್ ಚೊಡೋ, ಬಿಜೆಪಿಕೊ ಜೋಡೊ, (ಕಾಂಗ್ರೆಸ್ ಬಿಡಿ– ಬಿಜೆಪಿ ಸೇರಿ) ಗೋವಾದ ಸಮಗ್ರ ಅಭಿವೃದ್ಧಿಗಾಗಿ ನಾವು 8 ಶಾಸಕರು ಬಿಜೆಪಿ ಸೇರಿದ್ದೇವೆ’ ಎಂದು ಮೈಕಲ್ ಲೊಬೋ ಹೇಳಿದ್ದಾರೆ.

40 ಶಾಸಕ ಸದಸ್ಯತ್ವ ಬಲದ ಗೋವಾ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿತ್ತು.2019 ರಲ್ಲೂ ಕೂಡ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಜಿಗಿದಿದ್ದರು.

ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕು ಎಂಬ ನಿರ್ಣಯವನ್ನೇ ಕೈಗೊಂಡಿದ್ದಾರೆ.

8 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತಾವಡೆ ಹೇಳಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ನಿರ್ಣಯ ಅಂಗೀಕಾರ ಬೆಳಕಿಗೆ ಬಂದಿದೆ.

ವಿರೋಧ ಪಕ್ಷದ ನಾಯಕ ಮೈಕಲ್ ಲೋಬೊ ಅವರು ಇತರ ಏಳು ಶಾಸಕರ ಜೊತೆ ಈ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಶಾಸಕ ದಿಗಂಬರ್ ಕಾಮತ್ ಇದನ್ನು ಅಂಗೀಕರಿಸಿದ್ದಾರೆ. ಇದಕ್ಕೂ ಮುನ್ನ ಈ ಎಂಟು ಶಾಸಕರು ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT