ಶುಕ್ರವಾರ, ಡಿಸೆಂಬರ್ 3, 2021
27 °C

‘ಕರ್ನಾಟಕದಿಂದ ಗೋವಾಗೆ ಪ್ರತಿದಿನ 2 ಟನ್ ದನದ ಮಾಂಸ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಕರ್ನಾಟಕದಿಂದ ಪ್ರತಿದಿನ 2,000 ಕೆಜಿಗೂ ಹೆಚ್ಚು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ. 

ಗೋವಾ ವಿಧಾನಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ‘ಕಳೆದ ಆರು ತಿಂಗಳಲ್ಲಿ ಕರ್ನಾಟಕದಿಂದ ಗೋವಾಗೆ 388 ಟನ್‌ಗಳಷ್ಟು ದನ ಮತ್ತು ಎಮ್ಮೆಯ ಮಾಂಸವನ್ನು ತರಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿನ ವ್ಯಾಪಾರಿಗಳು ಪ್ರತಿದಿನ ಗೋವಾಗೆ ದನದ ಮಾಂಸ ಕಳುಹಿಸುತ್ತಾರೆ’ ಎಂದು ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

‘ಗೋವಾ– ಕರ್ನಾಟಕ ಗಡಿಯಲ್ಲಿ ಸಂಬಂಧಿತ ಅಧಿಕಾರಿಗಳು ಕರ್ನಾಟಕದ ದನದ ಮಾಂಸ ವ್ಯಾಪಾರಿಗಳಿಂದ ಸಂಗ್ರಹಿಸುವ ತೆರಿಗೆಯ ಮೊತ್ತದಿಂದ ಈ ಪ್ರಮಾಣವನ್ನು ಲೆಕ್ಕಹಾಕಲಾಗಿದೆ. ಪ್ರತಿದಿನ ಕರ್ನಾಟಕದಿಂದ ಸರಾಸರಿ 2,120 ಕೆ.ಜಿಯಷ್ಟು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ತೆರಿಗೆ ದಾಖಲೆಗಳು ಹೇಳುತ್ತವೆ’ ಎಂದು ಅವರು ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

‘ಕರ್ನಾಟಕ ವಿಧಾನಸಭೆಯ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿಗೆ ತಂದ ನಂತರ ಗೋವಾಗೆ ಪೂರೈಕೆಯಾಗುವ ದನದ ಮಾಂಸದಲ್ಲಿ ಭಾರಿ ವ್ಯತ್ಯಯವಾಗಿದೆ’ ಎಂದು ಅವರು ಹೇಳಿದ್ದಾರೆ. ಗೋವಾದ ಒಟ್ಟು ಜನಸಂಖ್ಯೆಯಲ್ಲಿ ಶೇ 30ರಷ್ಟು ಜನರು ದನ ಮತ್ತು ಎಮ್ಮೆಯ ಮಾಂಸವನ್ನು ತಿನ್ನುತ್ತಾರೆ. ಈ ಮಾಂಸಕ್ಕಾಗಿ ಗೋವಾ ರಾಜ್ಯವು ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಅವಲಂಬಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು