ಭಾನುವಾರ, ಜನವರಿ 24, 2021
21 °C
ರೇಷನ್‌ಕಾರ್ಡ್‌ದಾರರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಪೂರೈಕೆ– ಗೋವಾ ಸರ್ಕಾರದ ಹೊಸ ನಡೆ

ಗೋವಾ: ಕೆ.ಜಿಗೆ ₹32ರಂತೆ, ಪ್ರತಿ ಕಾರ್ಡ್‌ದಾರರಿಗೆ 3 ಕೆ.ಜಿ ಈರುಳ್ಳಿ ಪೂರೈಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ರಾಜ್ಯದ 3.5 ಲಕ್ಷ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ನಿಗದಿತ ಪ್ರಮಾಣದಲ್ಲಿ ಈರುಳ್ಳಿ ಪೂರೈಸಲು ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಬ್ಸಿಡಿ ದರದಲ್ಲಿ ಪಡಿತರಚೀಟಿದಾರರಿಗೆ ಈರುಳ್ಳಿ ವಿತರಿಸುವ ಪ್ರಸ್ತಾವನೆಗೆ ಬುಧವಾರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದೆ. ಈಗಾಗಲೇ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಂಸ್ಥೆಯೊಂದರಿಂದ 1,045 ಮೆಟ್ರಿಕ್‌ ಟನ್ನಿನಷ್ಟು ಈರುಳ್ಳಿಯನ್ನು ಗೋವಾ ಸರ್ಕಾರ ಖರೀದಿಸಿದೆ.

ಒಟ್ಟು 3.5 ಲಕ್ಷ ರೇಷನ್‌ ಕಾರ್ಡ್‌ ಹೊಂದಿರುವವರಿದ್ದು, ಕೆ.ಜಿಗೆ ₹32 ದರದಂತೆ, ಪ್ರತಿ ಕಾರ್ಡ್‌ದಾರರಿಗೆ ₹3 ಕೆ.ಜಿ ಈರುಳ್ಳಿ ನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ನಾಸಿಕ್‌ ಮೂಲದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(ಎನ್‌ಎಎಫ್‌ಇಡಿ) ದಿಂದ 1,045 ಮೆಟ್ರಿಕ್ ಟನ್‌ ಈರುಳ್ಳಿ ಖರೀದಿಸಿದ್ದು, ರಾಜ್ಯದ ಎಲ್ಲ ರೇಷನ್‌ ಕಾರ್ಡ್‌ದಾರರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ‘ ಎಂದು ಆಹಾರ ಸಬರಾಜು ವಿಭಾಗದ ನಿರ್ದೇಶಕ ಸಿದ್ದಿವಿನಾಯಕ ತಿಳಿಸಿದ್ದಾರೆ.

ಈರುಳ್ಳಿಯ ದಾಸ್ತಾನು ರಾಜ್ಯವನ್ನು ತಲುಪುತ್ತಿದ್ದಂತೆ, ಎಸ್‌ಎಂಎಸ್‌, ಸಾಮಾಜಿಕ ಜಾಲತಾಣ ಹಾಗೂ ಜಾಹಿರಾತು ಮೂಲಕ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ‘ ಎಂದು ನಾಯಕ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು