ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿತಪ್ಪಿದ ರೈಲು: 29 ರೈಲುಗಳ ಮಾರ್ಗ ಬದಲು

Last Updated 18 ಜುಲೈ 2022, 18:39 IST
ಅಕ್ಷರ ಗಾತ್ರ

ದಾಹೋದ್‌ (ಪಿಟಿಐ): ಮಧ್ಯಪ್ರದೇಶದಿಂದ ಗುಜರಾತ್‌ಗೆ ತೆರಳುತ್ತಿದ್ದ 16 ಬೋಗಿಯ ಗೂಡ್ಸ್‌ ರೈಲು ಸೋಮವಾರ ಹಳಿತಪ್ಪಿದ ಪರಿಣಾಮ, ಇದೇ ಮಾರ್ಗವಾಗಿ ಸಂಚರಿಸಬೇಕಿದ್ದ 29 ರೈಲುಗಳ ಮಾರ್ಗವನ್ನು ಬದಲಿಸಲಾಯಿತು. ಒಂದು ರೈಲಿನ ಸಂಚಾರವನ್ನು ರದ್ದು ಮಾಡಲಾಯಿತು ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಘಟನೆಯು ಮಂಗಲ್‌ ಮಹುಡಿ ಮತ್ತು ಲಿಮ್‌ಖೇಡ ರೈಲು ನಿಲ್ದಾಣದ ನಡುವೆ ಮಧ್ಯರಾತ್ರಿ 12.48ಕ್ಕೆ ನಡೆದಿದೆ. ಗೂಡ್ಸ್‌ ರೈಲು ಮಧ್ಯಪ್ರದೇಶದ ರತ್ಲಾಮ್‌ನಿಂದ ಗುಜರಾತ್‌ನ ವಡೋದರಕ್ಕೆ ಹೊರಟಿತ್ತು. ಯಾವುದೇ ಸಾವು–ನೋವು ಸಂಭವಿಸಿಲ್ಲ’ ಎಂದು ವಡೋದರ ವಿಭಾಗದ ವಕ್ತಾರ ಕೇಮ್‌ರಾಜ್‌ ಮೀನಾ ಹೇಳಿದರು.

‘ರೈಲಿನ ಕೆಲವು ಬೋಗಿಗಳಲ್ಲಿ ಬೆಂಕಿ ಕಿಡಿಗಳು ಕಂಡವು. ಜತೆಗೆ ರೈಲಿನ ಕೆಲವು ಭಾಗಗಳು ಕಾಣೆಯಾಗಿವೆ ಎಂದು ಸ್ಟೇಷನ್‌ ಮಾಸ್ಟರ್‌ ತಿಳಿಸಿದರು. ಘಟನೆಯ ಕುರಿತು ಇನ್ನೂ ವಿವರಣೆ ಪಡೆಯಬೇಕಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT