ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸುರಕ್ಷತೆ ಕಳಪೆ: ಕೇಂದ್ರ ಕಳವಳ

Last Updated 9 ಫೆಬ್ರುವರಿ 2021, 12:20 IST
ಅಕ್ಷರ ಗಾತ್ರ

ನವದೆಹಲಿ: ವಾಹನ ತಯಾರಿಕಾ ಕಂಪನಿಗಳು ಭಾರತದಲ್ಲಿ ಸುರಕ್ಷತಾ ಮಾನದಂಡಗಳನ್ನು ಉದ್ದೇಶಪೂರ್ವಕವಾಗಿ ತಗ್ಗಿಸಿ, ವಾಹನ ಮಾರಾಟ ಮಾಡುತ್ತಿವೆ ಎಂಬ ವರದಿಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ‘ಈ ಅಕ್ಷಮ್ಯ’ ಪ್ರವೃತ್ತಿಯನ್ನು ಬಿಡಬೇಕು ಎಂದು ಹೇಳಿದೆ.

‘ಕೆಲವು ವಾಹನ ತಯಾರಕರು ಮಾತ್ರ ಸುರಕ್ಷತಾ ರ್‍ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅದನ್ನು ಕೂಡ ಅವರು ತಾವು ತಯಾರಿಸುವ ದುಬಾರಿ ಬೆಲೆಯ ವಾಹನಗಳಲ್ಲಿ ಮಾತ್ರ ಅಳವಡಿಸುತ್ತಿದ್ದಾರೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ ಹೇಳಿದ್ದಾರೆ.

ರಸ್ತೆ ಸುರಕ್ಷತೆಯ ವಿಚಾರದಲ್ಲಿ ಆಟೊಮೊಬೈಲ್‌ ತಯಾರಕರ ಪಾತ್ರ ಅತ್ಯಂತ ಪ್ರಮುಖವಾದುದು. ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ವಾಹನಗಳನ್ನು ಗ್ರಾಹಕರಿಗೆ ನೀಡುವ ವಿಚಾರದಲ್ಲಿ ವಾಹನ ತಯಾರಕರು ಯಾವ ಪ್ರಯತ್ನವನ್ನೂ ಮಾಡದೆ ಇರುವಂತಿಲ್ಲ. ಆದರೆ, ಕೆಲವರು ಗುಣಮಟ್ಟ ತಗ್ಗಿಸುತ್ತಿರುವುದು ಅಕ್ಷಮ್ಯ ಎಂದು ಅವರು ಹೇಳಿದ್ದಾರೆ.

ಗ್ರಾಹಕರಿಗೆ ತಾವು ಖರೀದಿಸುತ್ತಿರುವುದು ಏನು, ಅದರ ಪರಿಣಾಮಗಳು ಏನು ಎಂಬುದು ಗೊತ್ತಾಗಬೇಕು. ಹಾಗಾಗಿ ವಾಹನ ತಯಾರಕರು ಎಲ್ಲ ವಾಹನಗಳಿಗೆ ಸುರಕ್ಷತೆಯ ರೇಟಿಂಗ್ಸ್ ಪಡೆಯುವುದು ಅಗತ್ಯವಾಗಬಹುದು ಎಂದು ಅರಮನೆ ಅವರು ಸಲಹೆ ನೀಡಿದರು.

ಅಮೆರಿಕ ಮತ್ತು ಭಾರತದಲ್ಲಿ ಆಗಿರುವ ಅಪಘಾತಗಳ ಹೋಲಿಕೆಯನ್ನು ಅರಮನೆ ನೀಡಿದರು. ಅಮೆರಿಕದಲ್ಲಿ 2018ರಲ್ಲಿ ಒಟ್ಟು 45 ಲಕ್ಷ ಅಪಘಾತಗಳಲ್ಲಿ, 36,560 ಜನ ಮೃತಪಟ್ಟಿದ್ದರು. ಅದೇ ವರ್ಷ ಭಾರತದಲ್ಲಿ 4.5 ಲಕ್ಷ ಅಪಘಾತಗಳು ಸಂಭವಿಸಿದ್ದವು, 1.5 ಲಕ್ಷ ಜನ ಮೃತಪಟ್ಟಿದ್ದರು ಎಂದು ವಿವರಿಸಿದರು.

ಭಾರತದಲ್ಲಿ ನಡೆದ ಅಪಘಾತಗಳ ಸಂಖ್ಯೆ ಕಡಿಮೆ ಇದ್ದರೂ, ಮೃತಪಟ್ಟವರ ಸಂಖ್ಯೆ ಜಾಸ್ತಿ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT