ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಭಿವೃದ್ಧಿಯಲ್ಲಿ ಟಾಟಾ ಗ್ರೂಪ್ ಮಹತ್ವದ ಪಾತ್ರ ವಹಿಸಿದೆ: ಪ್ರಧಾನಿ ಮೋದಿ

Last Updated 19 ಡಿಸೆಂಬರ್ 2020, 6:45 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಭಿವೃದ್ಧಿಯಲ್ಲಿ ‘ಟಾಟಾ ಗ್ರೂಪ್’ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಅಸೋಚಾಮ್‌ ಸ್ಥಾಪನಾ ವಾರ 2020’ ಉದ್ದೇಶಿಸಿ ಮಾತನಾಡಿದ ಅವರು, ಆತ್ಮ ನಿರ್ಭರ ಭಾರತ ಗುರಿ ಸಾಧಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳುವಂತೆ ಉದ್ಯಮಗಳಿಗೆ ಕರೆ ನೀಡಿದ್ದಾರೆ.

ಸುಧಾರಣೆಗಳು ಭಾರತದ ಕುರಿತಾದ ಜಾಗತಿಕ ದೃಷ್ಟಿಕೋನವನ್ನು ‘ಭಾರತ ಯಾಕೆ’ ಎಂಬುದರಿಂದ ‘ಭಾರತ ಯಾಕಾಗಬಾರದು’ ಎಂದು ಬದಲಾಯಿಸಿವೆ. ಉತ್ಪಾದನೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದು ಮೋದಿ ಹೇಳಿದ್ದಾರೆ.

ಅತ್ಯುತ್ತಮ ಕಾರ್ಪೊರೇಟ್ ಆಡಳಿತ ಮತ್ತು ಲಾಭ ಹಂಚಿಕೆ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಉದ್ಯಮ ವಲಯವನ್ನು ಪ್ರಧಾನಿ ಕೋರಿದ್ದಾರೆ.

ಭಾರತದ ಆರ್ಥಿಕತೆಯ ಮೇಲೆ ಜಗತ್ತು ನಂಬಿಕೆ ಇರಿಸಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿಯೂ ದಾಖಲೆಯ ಎಫ್‌ಡಿಐ, ಎಫ್‌ಪಿಐ ಹರಿದುಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಆರು ತಿಂಗಳ ಹಿಂದೆ ಮಾಡಿರುವ ಕೃಷಿ ಕ್ಷೇತ್ರಗಳ ಸುಧಾರಣೆಯ ಪ್ರಯೋಜನವನ್ನು ರೈತರು ಇಂದು ಪಡೆಯಲು ಆರಂಭಿಸಿದ್ದಾರೆ ಎಂದೂ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT