ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಾರಿಯರ್ ಮಕ್ಕಳಿಗೆ 5 ಎಂಬಿಬಿಎಸ್ ಸೀಟು ಮೀಸಲು –ಕೇಂದ್ರ ಸರ್ಕಾರ

2020–21 ಸಾಲಿನಿಂದ ಜಾರಿ: ಕೇಂದ್ರ ಸರ್ಕಾರದ ನಿರ್ಧಾರ
Last Updated 20 ನವೆಂಬರ್ 2020, 1:44 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕಿತರ ಆರೈಕೆಯಲ್ಲಿದ್ದು, ಸಾವನ್ನಪ್ಪಿದ ಕೋವಿಡ್‌ ವಾರಿಯರ್‌ಗಳ ಮಕ್ಕಳಿಗೆ 2020–2021ನೇ ಸಾಲಿನ ಎಂಬಿಬಿಎಸ್‌ ಪದವಿ ಶಿಕ್ಷಣ ಪ್ರವೇಶದಲ್ಲಿ ಕೇಂದ್ರ ಸರ್ಕಾರ ‘ಸೆಂಟ್ರಲ್‌ ಪೂಲ್‌‘ ವಿಭಾಗದಡಿ ಐದು ಸೀಟ್‌ಗಳನ್ನು ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ, ವಿದ್ಯಾರ್ಥಿಗಳ ಆಯ್ಕೆ ಮತ್ತು ನಾಮನಿರ್ದೇಶನಕ್ಕಾಗಿ ರಚಿಸಿರುವ ಮಾರ್ಗಸೂಚಿ ಗಳ ಅನ್ವಯ ‘ಕೋವಿಡ್‌ ವಾರಿಯರ್‌ ವಾರ್ಡ್‌‘ ಎಂಬ ಪ್ರತ್ಯೇಕ ವಿಭಾಗವನ್ನೇ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಕರ್ತವ್ಯದ ಕಾರಣದಿಂದಾಗಿ ಸೋಂಕು ತಗುಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಕೋವಿಡ್‌ ವಾರಿಯರ್‌ಗಳ ಉದಾತ್ತ ಸೇವೆಯನ್ನು ಗೌರವಿಸುವ ಹಾಗೂ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನಡೆಸುವ ಎನ್‌ಇಇಟಿ–2020ರಲ್ಲಿ ಪಡೆದ ರ‍್ಯಾಂಕ್ ಆಧಾರದ ಮೇಲೆ, ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ವೈದ್ಯಕೀಯ ಮಂಡಳಿ ಸಮಿತಿ (ಎಂಸಿಸಿ), ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ.

ಕೋವಿಡ್ ವಾರಿಯರ್‌ಗಳಿಗೆ ₹50 ಲಕ್ಷ ವಿಮಾ ಪ್ಯಾಕೇಜ್ ಘೋಷಿಸುವಾಗ ಸರ್ಕಾರ ‘ಕೋವಿಡ್ ಯೋಧ‘ರು ಯಾರು ಎಂದು ವ್ಯಾಖ್ಯಾನಿಸಿದೆ. ಅವರೆಲ್ಲರೂ ಈ ಸೌಲಭ್ಯಕ್ಕೆ ಒಳಪಡುತ್ತಾರೆ. ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸುವವರು ಹಾಗೂ ಕೋವಿಡ್‌ 19 ರೋಗಿಗಳ ನೇರ ಸಂಪರ್ಕ ಮತ್ತು ಆರೈಕೆಯಲ್ಲಿ ತೊಡಗಿರುವವರೆಲ್ಲರೂ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಇದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT