ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

156 ದೇಶಗಳ ಪ್ರಜೆಗಳ ’ಇ-ವೀಸಾ’ ಮರುಸ್ಥಾಪನೆ: ಕೇಂದ್ರ

Last Updated 16 ಮಾರ್ಚ್ 2022, 16:33 IST
ಅಕ್ಷರ ಗಾತ್ರ

ನವದೆಹಲಿ: 156 ದೇಶಗಳ ಪ್ರಜೆಗಳಿಗೆ ನೀಡಲಾಗಿದ್ದ ‘ಪ್ರವಾಸಿ ಇ–ವೀಸಾ’ ಹಾಗೂ ಇತರ ರಾಷ್ಟ್ರಗಳ ಪ್ರಜೆಗಳಿಗೆ ನೀಡಿದ್ದ ‘ಸಾಮಾನ್ಯ(ಕಾಗದ) ವೀಸಾ’ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಮರುಸ್ಥಾಪಿಸಿದೆ.

ಅಲ್ಲದೇ, ಅಮೆರಿಕ ಹಾಗೂ ಜಪಾನ್ ಪ್ರಜೆಗಳಿಗೆ ನೀಡಲಾಗಿದ್ದ 10 ವರ್ಷಗಳ ಅವಧಿಯ ಸಾಮಾನ್ಯ ಪ್ರವಾಸಿ (ಕಾಗದ) ವೀಸಾಗಳನ್ನು ಸಹ ಮರುಸ್ಥಾಪನೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಅನ್ವಯವಾಗುವಂತೆ ಈ ಎಲ್ಲ ವಿಧದ ವೀಸಾಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.

ಕೋವಿಡ್ ನಿರ್ಬಂಧಗಳಿಗೆ ಅನುಗುಣವಾಗಿ ಅರ್ಹ ರಾಷ್ಟ್ರಗಳ ಪ್ರಜೆಗಳಿಗೆ 5 ವರ್ಷಗಳ ಅವಧಿಯ ಸಾಮಾನ್ಯ ಪ್ರವಾಸಿ ವೀಸಾಗಳನ್ನು ಸಹ ನೀಡಲಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT