ಗುರುವಾರ , ಮೇ 19, 2022
22 °C

ಎಂಎಸ್‌ಪಿ ಸಮಿತಿಗೆ ರೈತ ಸಂಘಟನೆಗಳು ಇನ್ನೂ ಸದಸ್ಯರ ಹೆಸರನ್ನು ಸೂಚಿಸಿಲ್ಲ: ತೋಮರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಸಮಿತಿಗೆ ಕೆಲ ಸದಸ್ಯರ ಹೆಸರನ್ನು ಸೂಚಿಸುವಂತೆ ರೈತ ಸಂಘಟನೆಗಳಿಗೆ ಹೇಳಲಾಗಿತ್ತು. ಆದರೆ ಈವರೆಗೆ ಯಾವುದೇ ಹೆಸರುಗಳನ್ನು ಸಲ್ಲಿಸಲಾಗಿಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಬುಧವಾರ ತಿಳಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಇದೇ ವೇಳೆ ಹೆಚ್ಚು ‍ಪರಿಣಾಮಕಾರಿ ಮತ್ತು ಪಾರದರ್ಶಕ ವ್ಯವಸ್ಥೆಗಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿ ಸಮಿತಿಯನ್ನು ರೂಪಿಸುವುದಾಗಿ ಅವರು ಭರವಸೆ ನೀಡಿದ್ದರು. 

‘ನಾವು ಎಂಎಸ್‌ಪಿ ಸಮಿತಿಗಾಗಿ 2–3 ಸದಸ್ಯರ ಹೆಸರನ್ನು ನೀಡುವಂತೆ ರೈತ ಸಂಘಟನೆಗಳಿಗೆ ಹೇಳಿದ್ದೆವು. ಆದರೆ ಈವರೆಗೆ ನಮ್ಮ ಬಳಿ ಯಾವುದೇ ಹೆಸರುಗಳ ಪಟ್ಟಿ ಬಂದಿಲ್ಲ’ ಎಂದು ಅವರು ಹೇಳಿದರು. 

‘ಸಮಿತಿ ರಚನೆಯಲ್ಲಿ ವಿಳಂಬ ಉಂಟಾಗಿಲ್ಲ. ರೈತ ಸಂಘಟನೆಗಳ ಪ್ರತಿನಿಧಿಗಳು ಹೆಸರು ಸಲ್ಲಿಸಿದ ಕೂಡಲೇ ಎಂಎಸ್‌ಪಿ ಸಮಿತಿಯನ್ನು ರಚಿಸಲಾಗುವುದು’ ಎಂದು ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು