ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್ ಘಟಕಗಳ ಬಳಿ ಉದ್ದದ ಸಾಲು ತಡೆಯಲು ಹೊಸ ವ್ಯವಸ್ಥೆ: ನಿತಿನ್ ಗಡ್ಕರಿ

Last Updated 3 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ನವದೆಹಲಿ:ಹೆದ್ದಾರಿ ಟೋಲ್ ಘಟಕಗಳ ಬಳಿ ವಾಹನಗಳ ಉದ್ದನೆಯ ಸಾಲು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ರಾಜ್ಯಸಭೆಗೆ ತಿಳಿಸಿದರು.

ಟೋಲ್‌ ಘಟಕಗಳ ಬದಲು ಹೊಸ ತಂತ್ರಜ್ಞಾನ ಅಳವಡಿಸುವ ಕುರಿತು ಯೋಚಿಸಲಾಗುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತದೆ ಎಂದರು.

ಫಾಸ್ಟ್ಯಾಗ್ ಬದಲಿಗೆ ಇತರ ಎರಡು ಮಾದರಿಯಲ್ಲಿ ಶುಲ್ಕ ಸಂಗ್ರಹ ಮಾಡುವ ವಿಧಾನಗಳ ಕುರಿತು ಚರ್ಚೆ ನಡೆದಿದೆ. ಮೊದಲನೆಯದು ಉಪಗ್ರಹ ಆಧರಿತ ಶುಲ್ಕ ಸಂಗ್ರಹ. ಕಾರ್‌ಗಳಿಗೆ ಜಿಪಿಎಸ್‌ ಅಳವಡಿಸಿ, ಬಳಕೆದಾರರ ಬ್ಯಾಂಕ್‌ ಖಾತೆಯಿಂದ ನೇರವಾಗಿ ಶುಲ್ಕ ಪಡೆದುಕೊಳ್ಳವ ವ್ಯವಸ್ಥೆ ಇದಾಗಿದೆ. ವಾಹನಗಳ ನೋಂದಣಿ ಫಲಕ ಬಳಸಿ ಶುಲ್ಕ ವಿಧಿಸುವ ತಂತ್ರಜ್ಞಾನವುಎರಡನೆಯ ವಿಧಾನವಾಗಿದೆ. ಯಾವ ಮಾದರಿ ಅಳವಡಿಸಬೇಕು ಎಂಬುದನ್ನು ತಜ್ಞರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಗಡ್ಕರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT