ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮ: ಮೇಲ್ಮನವಿ ಸಮಿತಿ ರಚನೆಯ ಕರಡು ಪ್ರಸ್ತಾವನೆ ವಾಪಸ್

Last Updated 3 ಜೂನ್ 2022, 15:49 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಕುಂದು ಕೊರತೆ ಅಧಿಕಾರಿಗಳು ನೀಡುವ ತೀರ್ಪಿನ ವಿರುದ್ದ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗಾಗಿ ಮೇಲ್ಮನವಿ ಸಮಿತಿಯೊಂದನ್ನು ರಚಿಸಲು ಮುಂದಾಗಿದ್ದ ಕೇಂದ್ರ ಸರ್ಕಾರವು, ಪ್ರಸ್ತಾವನೆಯ ಕರಡು ತಿದ್ದುಪಡಿಯ ಟಿಪ್ಪಣಿಯನ್ನು ಹಿಂಪಡೆದಿದೆ.

ಕರಡು ಟಿಪ್ಪಣಿಯನ್ನು ಹಿಂತೆಗೆದುಕೊಳ್ಳುವ ಕುರಿತು ಕೇಂದ್ರ ಸರ್ಕಾರವು ಅಧಿಕೃತವಾಗಿ ತಿಳಿಸಿಲ್ಲ. ಆದರೆ, ಉದ್ದೇಶಿತ ಕರಡು ತಿದ್ದುಪಡಿಯ ಟಿಪ್ಪಣಿಯು ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪೋರ್ಟಲ್‌ನಲ್ಲಿ ಕಾಣೆಯಾಗಿದೆ.

‘ಇತರ ಕೆಲವು ವಿಷಯಗಳನ್ನು ಸೇರಿಸಿದ ನಂತರ ಪರಿಷ್ಕೃತ ಕರಡನ್ನು ಮತ್ತೆ ಪ್ರಕಟಿಸಲಾಗುವುದು’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು– 2021ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಮಾರ್ಗಸೂಚಿಗಳ ಉಲ್ಲಂಘನೆ ಕಾರಣ ನೀಡಿ, ಕೆಲ ಸಾಮಾಜಿಕ ಮಾಧ್ಯಮಗಳು ಗಣ್ಯರು ಸೇರಿದಂತೆ ಅನೇಕ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಿರುವ ನಿದರ್ಶನಗಳಿವೆ. ಹೀಗಾಗಿ, ಕುಂದುಕೊರತೆ ಮೇಲ್ಮನವಿ ಸಮಿತಿ ರಚಿಸುವ ಕುರಿತು ಕೇಂದ್ರ ಪ್ರಸ್ತಾವ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT