ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಕಾಲುನಡಿಗೆಯಲ್ಲೇ ವಧುವಿನ ಗ್ರಾಮ ತಲುಪಿದ ವರ

Last Updated 17 ಮಾರ್ಚ್ 2023, 15:23 IST
ಅಕ್ಷರ ಗಾತ್ರ

ಭುವನೇಶ್ವರ, ಒಡಿಶಾ: ಒಡಿಶಾದಲ್ಲಿ ಚಾಲಕರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ, ರಾಯಗಡ ಜಿಲ್ಲೆಯಲ್ಲಿರುವ ವಧುವಿನ ಗ್ರಾಮವನ್ನು ವರ ಹಾಗೂ ಆತನ ಕುಟುಂಬದವರು ಕಾಲ್ನಡಿಗೆ ಮೂಲಕವೇ ತಲುಪಿದ ಘಟನೆ ನಡೆದಿದೆ.

ಕಲ್ಯಾಣ್‌ಸಿಂಗ್‌ಪುರದ ಬ್ಲಾಕ್‌ನ ಸುನಖಂಡಿ ಪಂಚಾಯತ್‌ನಿಂದ ದಿಬಲಪಾಡು ಗ್ರಾಮವನ್ನು ತಲುಪಲು ಕೆಲವು ಮಹಿಳೆಯರೂ ಸೇರಿದಂತೆ ವರನ ಕಡೆಯವರು ಗುರುವಾರ ರಾತ್ರಿ ಇಡೀ ಕಾಲ್ನಡಿಗೆಯಲ್ಲಿ ಸಾಗಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಚಾಲಕರ ಮುಷ್ಕರದಿಂದಾಗಿ ಸಂಚಾರ ಸೌಲಭ್ಯ ಇಲ್ಲ. ನಾವು ಇಡೀ ರಾತ್ರಿ ಕಾಲ್ನಡಿಗೆಯ ಮೂಲಕ ಸಾಗಿ ವಧುವಿನ ಗ್ರಾಮ ತಲುಪಿದ್ದೇವೆ. ನಮ್ಮ ಬಳಿ ಬೇರೆ ಆಯ್ಕೆ ಇರಲಿಲ್ಲ’ ಎಂದು ವರನ ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ. ವಧು–ವರರ ವಿವಾಹ ಶುಕ್ರವಾರ ಬೆಳಿಗ್ಗೆ ಜರುಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT