ಶನಿವಾರ, ಮೇ 21, 2022
25 °C

ಮಿಜೋರಾಂನಲ್ಲಿ ವಿಶ್ವದ ಅತಿದೊಡ್ಡ ಚರ್ಚ್‌ ನಿರ್ಮಾಣ: ಕ್ರೈಸ್ತರ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಐಜ್ವಾಲ್: ಜಗತ್ತಿನಲ್ಲಿಯೇ ದೊಡ್ಡದಾದ ಚರ್ಚ್‌ಅನ್ನು ರಾಜ್ಯದ ಸರ್ಚಿಪ್‌ ಜಿಲ್ಲೆಯಲ್ಲಿ ನಿರ್ಮಿಸಲಾಗುವುದು ಎಂದು ಮಿಜೋರಾಂನ ಕ್ರೈಸ್ತರ ಸಂಸ್ಥೆಯೊಂದು ಹೇಳಿದೆ.

‘ಪ್ರಸ್ತಾವಿತ ಚರ್ಚ್‌ಅನ್ನು 23,809.52 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವುದು. ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್‌ ಬ್ಯಾಸಿಲಿಕಾ ಇರುವ ಪ್ರದೇಶಕ್ಕಿಂತ 809.52 ಚದರ ಮೀಟರ್ ಹೆಚ್ಚು ವಿಸ್ತೀರ್ಣದ ಜಾಗದಲ್ಲಿ ಈ ಚರ್ಚ್‌ ಅನ್ನು ನಿರ್ಮಿಸಲಾಗುವುದು’ ಎಂದು ರೆವರೆಂಡ್ ಡಾ.ಝೈಛಾವ್ನಾ ಹಲಾವಾಂಡೊ ತಿಳಿಸಿದ್ದಾರೆ.

‘‘ಝೋಫೇಟ್‌’ ಎಂದು ಕರೆಯಲಾಗುವ ಮಿಜೊ ಬುಡಕಟ್ಟು ಜನರಿಗೆ ಸೇರಿದ ಚರ್ಚ್‌ ಇದಾಗಿದೆ. ಸಾರ್ವಜನಿಕರ ದೇಣಿಗೆ ಹಾಗೂ ಸ್ವಯಂ ಸೇವೆ ಮೂಲಕ ಚರ್ಚ್‌ ನಿರ್ಮಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು