ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ವಿದ್ಯುತ್‌ ಸಬ್ಸಿಡಿಯಾಗಿ ₹12,757 ಕೋಟಿ ಪಾವತಿ

Last Updated 18 ಮಾರ್ಚ್ 2023, 14:12 IST
ಅಕ್ಷರ ಗಾತ್ರ

ಗಾಂಧಿನಗರ: ಗುಜರಾತ್‌ ಸರ್ಕಾರ ಕಳೆದ ಎರಡು ವರ್ಷಗಳ ವಿದ್ಯುತ್‌ ಸಬ್ಸಿಡಿಯಾಗಿ ರೈತರಿಗೆ ₹12,757 ಕೋಟಿ ಪಾವತಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಬ್ಸಿಡಿ ನೀಡಲು ₹10,970 ಕೋಟಿ ಮೀಸಲಿಟ್ಟಿದೆ ಎಂದು ಶನಿವಾರ ರಾಜ್ಯದ ವಿಧಾನಸಭೆ ಮಾಹಿತಿ ನೀಡಿದೆ.

‘ಕೃಷಿ ಉದ್ದೇಶಕ್ಕೆ ಬಳಸುವ ಪ್ರತಿ ಎಚ್‌‍ಪಿ(ಹಾರ್ಸ್‌ ಪವರ್‌) ವಿದ್ಯುತ್‌ ಬಳಕೆಗೆ ವಾರ್ಷಿಕ ₹2,400 ತೆರಿಗೆ ವಿಧಿಸಲಾಗುತ್ತಿದೆ. ಈ ಪೈಕಿ ರೈತರು ಕೇವಲ ₹665 ಪಾವತಿಸುತ್ತಾರೆ. ಉಳಿದ ₹1,735 ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ’ ಎಂದು ಇಂಧನ ಸಚಿವ ಕಾನು ದೇಸಾಯಿ ತಿಳಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕೃಷಿ ಉದ್ದೇಶಕ್ಕೆ ಬಳಕೆ ಮಾಡುವ ವಿದ್ಯುತ್‌ಗೆ ವಿಧಿಸುವ ನಿಗದಿತ ಶುಲ್ಕದಿಂದಲೂ ವಿನಾಯಿತಿ ಪಡೆಯುತ್ತಾರೆ’ ಎಂದು ಅವರು ತಿಳಿಸಿದರು.

‘ವರ್ಷಕ್ಕೆ ಪ್ರತಿ ಎಚ್‌ಪಿ ವಿದ್ಯುತ್‌ ಬಳಕೆಗೆ ವಿಧಿಸಲಾಗುತ್ತಿದ್ದ ₹20 ನಿಗದಿತ ಶುಲ್ಕವನ್ನು ₹10ಗೆ ಇಳಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT