ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ10,098 ಅಲ್ಲ, 19,964

ಸುಪ್ರೀಂ ಕೋರ್ಟ್‌ಗೆ ಪರಿಷ್ಕೃತ ಪಟ್ಟಿ ಸಲ್ಲಿಸಿದ ರಾಜ್ಯ ಸರ್ಕಾರ
Last Updated 13 ಡಿಸೆಂಬರ್ 2021, 21:53 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಈ ಮೊದಲು ಪ್ರಕಟಿಸಿದ್ದಕ್ಕಿಂತಲೂ ಸುಮಾರು 10 ಸಾವಿರ ಹೆಚ್ಚಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಮೃತರ ಅವಲಂಬಿತರಿಗೆ ಪರಿಹಾರ ಮೊತ್ತವನ್ನು ಪಾವತಿಸಲಾಗಿದ್ದು, ಮೃತರವಿವರ ಒಳಗೊಂಡ ಪರಿಷ್ಕೃತ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರ ಸೋಮವಾರ ಸಲ್ಲಿಸಿದೆ.

ಮೊದಲು ಕೋವಿಡ್‌ನಿಂದ ಗುಜರಾತ್‌ನಲ್ಲಿ 10,098 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಪರಿಷ್ಕೃತ ಪಟ್ಟಿಯಂತೆ ಮೃತರ ಸಂಖ್ಯೆ 19,964 ಆಗಿದೆ. ತಲಾ ₹ 50 ಸಾವಿರ ಪರಿಹಾರ ಕೋರಿದ್ದ ಒಟ್ಟು 34,678 ಅರ್ಜಿಗಳನ್ನುಗುಜರಾತ್ ಸರ್ಕಾರ ಸ್ವೀಕರಿಸಿದ್ದು, 19,964 ಪ್ರಕರಣಗಳಲ್ಲಿ ಪರಿಹಾರ ಪಾವತಿಸಲಾಗಿದೆ.

ಪರಿಹಾರ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳದಿದ್ದರೆ ಕುಗ್ರಾಮಗಳಲ್ಲಿ ಇರುವ ಅವಲಂಬಿತರಿಗೆ ಆನ್‌ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದೇ ತಿಳಿಯುವುದಿಲ್ಲ ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿತು.

ಆಕಾಶವಾಣಿಯ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಗುಜರಾತ್‌ ಸರ್ಕಾರ ತಿಳಿಸಿತು. ಇದಕ್ಕೆ ಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ಆರ್.ಶಾ ಅವರು, ‘ಆಕಾಶವಾಣಿಯನ್ನು ಯಾರು ಕೇಳುತ್ತಾರೆ?’ ಎಂದು ಪ್ರಶ್ನಿಸಿದರು.

‘ಸ್ಥಳೀಯ ಪತ್ರಿಕೆಗಳಲ್ಲಿ ಏಕೆ ಜಾಹೀರಾತು ನೀಡಿಲ್ಲ? ಸಾಮಾನ್ಯ ಜನರಿಗೆ ಹೇಗೆ ಮಾಹಿತಿ ತಲುಪಿಸುತ್ತೀರಿ? ಜನತೆ ₹ 50 ಸಾವಿರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಎಲ್ಲ ಪತ್ರಿಕೆಗಳು, ದೂರದರ್ಶನ ಹಾಗೂ ಸ್ಥಳೀಯ ಚಾನೆಲ್‌ಗಳಲ್ಲಿ ಸಮರ್ಪಕವಾಗಿ ಜಾಹೀರಾತು ನೀಡಬೇಕು’ ಎಂದೂ ನ್ಯಾಯಮೂರ್ತಿ ತಾಕೀತು ಮಾಡಿದರು.

ಸುಪ್ರೀಂ ಕೋರ್ಟ್‌ ಕಳೆದ ಅಕ್ಟೋಬರ್‌ನಲ್ಲಿ, ಮೃತರ ಅವಲಂಬಿತರಿಗೆ ₹50 ಸಾವಿರ ಪರಿಹಾರ ವಿತರಿಸಬೇಕು. ಅದಕ್ಕೂ ಹೆಚ್ಚಿನ ಮೊತ್ತವನ್ನು ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಯಡಿ ನೀಡಬೇಕು ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT