ಭಾನುವಾರ, ಸೆಪ್ಟೆಂಬರ್ 25, 2022
28 °C

ಕೋಲ್ಕತ್ತ ಬಂದರು ಪ್ರದೇಶ ಸಮೀಪ ₹198 ಕೋಟಿ ಮೌಲ್ಯದ ಹೆರಾಯಿನ್ ವಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಪಶ್ಚಿಮ ಬಂಗಾಳ ಕೋಲ್ಕತ್ತ ಬಂದರು ಪ್ರದೇಶ ಸಮೀಪದಲ್ಲಿ ₹ 197.82 ಕೋಟಿ ಮೌಲ್ಯದ 39.5 ಕೆಜಿ ಹೆರಾಯಿನ್ ಅನ್ನು ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿವೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನ ಜೆಬೆಲ್ ಅಲಿ ಬಂದರಿನ ಮೂಲಕ ಬಂದ ಶಿಪ್ಪಿಂಗ್ ಕಂಟೈನರ್ ಕಳಿಸಲಾಗಿದ್ದ 7,220 ಕಿ.ಗ್ರಾಂಗಳಷ್ಟು ಲೋಹದ ಸ್ಕ್ಯಾಪ್‌ನ ಭಾಗವಾಗಿರುವ 12 ಗಿಯರ್ ಬಾಕ್ಸ್‌ಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟು ಫೆಬ್ರುವರಿಯಲ್ಲಿ ಕೋಲ್ಕತ್ತ ಬಂದರಿಗೆ ತಲುಪಿಸಲಾಗಿತ್ತು ಎಂದು ಗಾಂಧಿನಗರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಜರಾತ್‌ನ ಡಿಜಿಪಿ ಆಶಿಶ್ ಭಾಟಿಯಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು