ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡೋದರದಲ್ಲಿ ₹121.40 ಕೋಟಿ ಮೌಲ್ಯದ ಮೆಫೆಡ್ರೋನ್ ಡ್ರಗ್ಸ್ ವಶ

Last Updated 7 ಡಿಸೆಂಬರ್ 2022, 13:56 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳವು(ಎಟಿಎಸ್) ₹121.40 ಕೋಟಿ ಮೌಲ್ಯದ 24.28 ಕೆ.ಜಿಯಷ್ಟು ಮೆಫೆಡ್ರೋನ್ ಮಾದಕ ವಸ್ತುವನ್ನು ವಡೋದರದಲ್ಲಿ ವಶಪಡಿಸಿಕೊಂಡಿದೆ.

ವಡೋದರ ನಗರದ ಹೊರವಲಯದಲ್ಲಿ ₹478 ಕೋಟಿ ಮೌಲ್ಯದ ಮೆಫೆಡ್ರೋನ್ ಮತ್ತು ಅದರ ಉತ್ಪಾದನೆಗೆ ಬಳಸುವ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಂಡ ಕೆಲ ದಿನಗಳ ಬಳಿಕ ಈ ಜಫ್ತಿ ನಡೆದಿದೆ.

ನವೆಂಬರ್ 29ರಂದು ವಡೋದರ ಜಿಲ್ಲೆಯ ಸಿಂದ್ರೋಟ್ ಹಳ್ಳಿಯ ಕಾರ್ಖಾನೆ ಮೇಲೆ ದಾಳಿ ನಡೆಸಿ ಮಾದಕ ವಸ್ತು ವಶಪಡಿಸಿಕೊಂಡ ಸಂದರ್ಭ ಬಂಧನಕ್ಕೊಳಗಾಗಿದ್ದ ಐವರು ಆರೋಪಿಗಳ ಪೈಕಿ ಒಬ್ಬರಾದ ಶೈಲೇಶ್ ಕಠಾರಿಯಾ ನಿವಾಸದಲ್ಲೇ ಬುಧವಾರ ಈ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ವೃತ್ತಿಯಲ್ಲಿ ಕೆಮಿಸ್ಟ್ ಆಗಿರುವ ಕಠಾರಿಯಾರನ್ನು ಮಾದಕ ವಸ್ತು ಮಾರಾಟಗಾರರು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ತನಿಖೆ ವೇಳೆ, ಸಿಂದ್ರೋಟ್ ಕಾರ್ಖಾನೆಯಲ್ಲಿ ತಯಾರಿಸಲಾದ ದೊಡ್ಡ ಪ್ರಮಾಣದ ಎಂಡಿ ಡ್ರಗ್ಸ್ ತಮ್ಮ ಮನೆಯಲ್ಲಿ ಇರುವುದಾಗಿ ಕಠಾರಿಯಾ ಬಾಯಿ ಬಿಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಆತನ ಮನೆಯಲ್ಲಿ ಶೋಧ ನಡೆಸಿದ ಎಟಿಎಸ್ ತಂಡ ₹121.40 ಕೋಟಿ ಮೌಲ್ಯದ 24.28 ಕೆ.ಜಿಯಷ್ಟು ನಿಷೇಧಿತ ಮಾದಕ ದ್ರವ್ಯವನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT