ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜು ಪ್ರಕರಣ: ಗುಜರಾತ್‌ನ ಬಿಜೆಪಿ ಶಾಸಕನಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ

Last Updated 11 ಮೇ 2022, 12:57 IST
ಅಕ್ಷರ ಗಾತ್ರ

ಹಾಲೋಲ್(ಗುಜರಾತ್): ಜೂಜು ಪ್ರಕರಣವೊಂದರಲ್ಲಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಾಲೋಲ್ ನ್ಯಾಯಾಲಯವು ಬಿಜೆಪಿ ಶಾಸಕ ಕೇಸರಿ ಸಿನ್ಹಾ ಸೋಲಂಕಿ ಮತ್ತು ಇತರ 25 ಮಂದಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ರೆಸಾರ್ಟ್‌ ಮೇಲೆ ದಾಳಿ ನಡೆಸಿ ಜೂಜಾಡುತ್ತಿದ್ದ ಬಿಜೆಪಿ ಶಾಸಕ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಖೇಡಾ ಜಿಲ್ಲೆಯ ಮಟರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಮತ್ತು ಇತರರಿಗೆ ಶಿಕ್ಷೆ ಜೊತೆಗೆ ತಲಾ ₹ 3,000 ದಂಡವನ್ನೂ ಸಹ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಪ್ರೇಮ್ ಹಂಸರಾಜ್ ಸಿಂಗ್ ವಿಧಿಸಿದ್ದಾರೆ. ಜುಲೈ 1,2021ರ ರಾತ್ರಿ ಕಾರ್ಯಾಚರಣೆ ನಡೆಸಿದ್ದ ಸ್ಥಳೀಯ ಅಪರಾಧ ದಳದ ಪೊಲೀಸರು ಮತ್ತು ಪಾವಗಡ ಪೊಲೀಸ್ ಠಾಣೆ ಸಿಬ್ಬಂದಿ ಶಿವರಾಜ್‌ಪುರ್ ಬಳಿಯ ರೆಸಾರ್ಟ್‌ನಲ್ಲಿ ಜೂಜಿನಲ್ಲಿ ತೊಡಗಿದ್ದ ಶಾಸಕ ಸೋಲಂಕಿ ಮತ್ತು ನೇಪಾಳದ ನಾಲ್ಕು ಮಂದಿ ಸೇರಿ ಒಟ್ಟು 7 ಮಹಿಳೆಯರು ಸೇರಿದಂತೆ 25 ಜನರನ್ನು ವಶಕ್ಕೆ ಪಡೆದಿದ್ದರು.

ನಿಯಮಗಳನ್ನು ಮೀರಿ ಜೂಜಿಗೆ ಅವಕಾಶ ಮಾಡಿಕೊಟ್ಟ ರೆಸಾರ್ಟ್ ಪರವಾನಗಿಯನ್ನು ನ್ಯಾಯಾಲಯ ರದ್ದು ಮಾಡಿದೆ.

ದಾಳಿ ವೇಳೆ ₹3.9 ಲಕ್ಷ ಹಣ, 8 ವಾಹನಗಳು, 25 ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ಸೇರಿ ಒಟ್ಟು ₹1.15 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸಾರ್ವಜನಿಕ ಜೂಜು ಕಾಯ್ದೆಯ ವಿಧಿ 4 ಮತ್ತು 5ರ ಅಡಿಯಲ್ಲಿ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದರು. 34 ಸಾಕ್ಷಿಗಳು, 13 ದಾಖಲೆಗಳನ್ನು ಪೊಲೀಸರು ಸಲ್ಲಿಸಿದ್ದರು.

ಶಿಕ್ಷೆಗೀಡಾಗಿರುವ ಬಿಜೆಪಿ ಶಾಸಕ ಸೋಲಂಕಿ, 2014 ರ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ಬಳಿಕ, 2017ರ ಸಾರ್ವತ್ರಿಕ ಚುನಾವಣೆಯಲ್ಲೂ ಆರಿಸಿ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT