ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಮಹಾನಗರ ಪಾಲಿಕೆ ಚುನಾವಣೆ: ಅಹಮದಾಬಾದ್‌ನಲ್ಲಿ ಅಮಿತ್‌ ಶಾ ಮತ ಚಲಾವಣೆ

Last Updated 21 ಫೆಬ್ರುವರಿ 2021, 8:22 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ಮತದಾನ ಪ್ರಕ್ರಿಯೆ ಭಾನುವಾರ ಆರಂಭವಾಗಿದ್ದು, ಗೃಹ ಸಚಿವ ಅಮಿತ್‌ ಶಾ ಅವರು ಅಹಮದಾಬಾದ್‌ನಲ್ಲಿ ತಮ್ಮ ಮತ ಚಲಾಯಿಸಿದರು.

ಈ ಬಳಿಕ ಮಾತನಾಡಿದ ಅವರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ‌ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ದೇಶದ ಹಲವೆಡೆ ಗೆಲುವನ್ನು ಸಾಧಿಸಿದೆ. ಬಿಜೆಪಿ ಗೆಲುವಿನ ಪಯಣ ಆರಂಭವಾದ ಗುಜರಾತ್‌ನಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ಧೇವೆ’ ಎಂದು ಅಮಿತ್‌ ಶಾ ಹೇಳಿದರು.

ಅಹಮದಾಬಾದ್‌, ಸೂರತ್‌, ವಡೋದರ, ರಾಜ್‌ಕೋಟ್‌, ಜಾಮ್‌ನಗರ ಮತ್ತು ಭಾವ್‌ನಗರ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಯುತ್ತಿದೆ.

ಕಳೆದ ಹಲವು ವರ್ಷಗಳಿಂದ ಬಿಜೆಪಿ ಈ ಆರೂ ಮಹಾನಗರ ಪಾಲಿಕೆಗಳಲ್ಲಿ ಅಧಿಕಾರದಲ್ಲಿದೆ.

ಅಹಮದಾಬಾದ್‌ ಮಹಾನಗರ ಪಾಲಿಕೆಯ ನಾಗ್ಪುರ ಉಪ ವಿಭಾಗ ಕಚೇರಿಯ ಮತಗಟ್ಟೆಯಲ್ಲಿ ಅಮಿತ್‌ ಶಾ ಮತ್ತು ಅವರ ಕುಟುಂಬದ ಸದಸ್ಯರು ಮತ ಚಲಾಯಿಸಿದರು. ಮತಗಟ್ಟೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಈ ಬಳಿಕ ಅವರು ಕಾಮನಾಥ್ ಮಹಾದೇವ್ ದೇವಸ್ಥಾನಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT