ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆ| ಮತಗಟ್ಟೆಯಲ್ಲಿ ಎಲ್‌ಪಿಜಿ ಸಿಲಿಂಡರ್‌, ದನ-ಕರು

Last Updated 1 ಡಿಸೆಂಬರ್ 2022, 16:53 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣೆಯಮೊದಲ ಹಂತದ ಮತದಾನದ ವೇಳೆ ಹಲವು ಮತದಾರರು ಎಲ್‌ಪಿಜಿ ಸಿಲಿಂಡರ್‌, ದನ–ಕರುಗಳನ್ನು ಮತಗಟ್ಟೆಗೆ ತಂದು ಪ್ರತಿಭಟನೆ ದಾಖಲಿಸಿದರು.

ಅಡುಗೆ ಅನಿಲ ಸಿಲಿಂಡರ್‌ನ ಬೆಲೆ ಏರಿಕೆಯನ್ನು ಖಂಡಿಸಿ ಜಾಸ್ಮಿನ್ ಮರ್ಚಂಟ್‌ ಎಂಬುವವರು ಮತಗಟ್ಟೆಗೆ, ಖಾಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಹೊತ್ತು ತಂದರು.

‘ನನ್ನ ಕನಸಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬಂದಿತ್ತು. ಅದೂ ಮತಹಾಕಬೇಕು ಎಂದು ತನ್ನ ಬಯಕೆ ಹೇಳಿಕೊಂಡಿತು. ಹೀಗಾಗಿ ಅದನ್ನು ಮತಗಟ್ಟೆಗೆ ಹೊತ್ತುತಂದೆ’ ಎಂದು ಅವರು ಲೇವಡಿ ಮಾಡಿದ್ದಾರೆ.

ಅಮ್ರೇಲಿ ಕಾಂಗ್ರೆಸ್‌ ಶಾಸಕ ಪರೇಶ್ ಧನಾನಿ ಮತ್ತು ಸಂಗಡಿಗರು ಮತಗಟ್ಟೆಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸೈಕಲ್‌ನಲ್ಲಿ ಹೊತ್ತು ತಂದರು. ‘2014ರಲ್ಲಿ ₹450, 2022ರಲ್ಲಿ ₹1,100’ ಎಂಬ ಪೋಸ್ಟರ್‌ ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗಿತ್ತು. ‘ಪೆಟ್ರೊಲ್‌ ಬೆಲೆ ಲೀಟರ್‌ಗೆ ₹100 ದಾಟಿದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆ ₹1,100 ದಾಟಿದೆ. ಬಡವರು ಹೇಗೆ ಬದುಕಬೇಕು? ಈ ಬೆಲೆ ಏರಿಕೆಯನ್ನು ಪ್ರತಿಭಟಿಸುವ ಸಲುವಾಗಿ ಸೈಕಲ್‌ ಮೇಲೆ ಸಿಲಿಂಡರ್‌ ಹೊತ್ತು ತಂದೆವು’ ಎಂದು ಧನಾನಿ ಹೇಳಿದ್ದಾರೆ.

ಗೋವು ಮತ್ತು ಕುರಿಗಳನ್ನು ಸಾಕುವ ಅಲೆಮಾರಿಗಳಾದ ಮಾಲಾಧಾರಿ ಸಮುದಾಯದವರೂ ತಮ್ಮ ಪ್ರತಿಭಟನೆ ದಾಖಲಿಸಲು ಮತದಾನದ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು. ಕಛ್‌ನ ಮತಗಟ್ಟೆ ಒಂದಕ್ಕೆ ಹಸು ಮತ್ತು ಕರುಗಳನ್ನು ಮಾಲಾಧಾರಿ ಜನರು ಕರೆತಂದಿದ್ದರು. ‘ನಮ್ಮ ಕಷ್ಟಗಳಿಗೆ ಸರ್ಕಾರ ಗಮನ ಕೊಡುತ್ತಿಲ್ಲ. ನಮ್ಮ ಕಷ್ಟಗಳ ಬಗ್ಗೆ ಗಮನ ನೀಡಬೇಕು ಎಂದು ಒತ್ತಾಯಿಸಲು ಹಸು–ಕರುಗಳನ್ನು ಮತಗಟ್ಟೆಗೆ ಕರೆತಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಮತ್ತು ಎಎಪಿಯ ಕಾರ್ಯಕರ್ತರು ಮತಗಟ್ಟೆಗೆ ಸೈಕಲ್‌ನಲ್ಲಿ ಬರುವ ಮೂಲಕ ಬೆಲೆ
ಏರಿಕೆಯನ್ನು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT