ಶನಿವಾರ, ಜನವರಿ 23, 2021
22 °C

ಗುಜರಾತ್ ಮಾಜಿ ಸಿಎಂ ಮಾಧವಸಿನ್ಹ ಸೋಲಂಕಿ ನಿಧನ; ಪ್ರಧಾನಿ ಮೋದಿ ಸಂತಾಪ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಧವಸಿನ್ಹ ಸೋಲಂಕಿ ಶನಿವಾರ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಮಾಧವಸಿನ್ಹ ಸೋಲಂಕಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪವನ್ನು ಸೂಚಿಸಿದ್ದಾರೆ. 1991-92ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿಯೂ ಮಾಧವಸಿನ್ಹ ಸೋಲಂಕಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: 

ಶ್ರೀ ಮಾಧವಸಿನ್ಹ ಸೋಲಂಕಿ ಅಸಾಧಾರಣ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜಕ್ಕೆ ಅವರು ಮಾಡಿದ ಸಮೃದ್ಧ ಸೇವೆಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ನಿಧನದಿಂದ ದು:ಖಿತನಾಗಿದ್ದೇನೆ. ಅವರ ಪುತ್ರ ಭಾರತ್ ಸೋಲಂಕಿ ಜೊತೆ ಮಾತನಾಡಿದ್ದು, ಸಂತಾಪವನ್ನು ಸೂಚಿಸಿದ್ದೇನೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ರಾಜಕೀಯದ ಹೊರತಾಗಿ ಶ್ರೀ ಮಾಧವಸಿನ್ಹ ಸೋಲಂಕಿ ಓದು ಹವ್ಯಾಸವನ್ನು ಆನಂದಿಸಿದ್ದರು. ಅಲ್ಲದೆ ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ನಾನು ಅವರನ್ನು ಭೇಟಿಯಾದಗೆಲ್ಲ ಅಥವಾ ಮಾತನಾಡುವಾಗಲೆಲ್ಲಾ ನಾವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವರು ಇತ್ತೀಚೆಗೆ ಓದಿದ ಪುಸ್ತಕದ ಬಗ್ಗೆ ನನಗೆ ಮಾಹಿತಿ ನೀಡುತ್ತಿದ್ದರು. ನಾವು ಪರಸ್ಪರ ಹೊಂದಿದ್ದ ಸಂವಾದಗಳನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು