ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಈರುಳ್ಳಿ ಬೆಳೆಗಾರರಿಗೆ ₹ 330 ಕೋಟಿ ಪ್ಯಾಕೇಜ್‌

Last Updated 7 ಮಾರ್ಚ್ 2023, 15:32 IST
ಅಕ್ಷರ ಗಾತ್ರ

ಗಾಂಧಿನಗರ (ಪಿಟಿಐ): ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಹಾಗೂ ಆಲೂ ಗೆಡ್ಡೆ ಬೆಳೆಗಾರರ ನೆರವಿಗೆ ಧಾವಿಸಿರುವ ಗುಜರಾತ್‌ ಸರ್ಕಾರವು ಸಾಗಣೆ ಹಾಗೂ ಸಂಗ್ರಹಣೆಗಾಗಿ ₹330 ಕೋಟಿಯ ಪ್ಯಾಕೇಜ್‌ ಪ್ರಕಟಿಸಿದೆ.

‘ರಾಜ್ಯದಲ್ಲಿ ಈ ವರ್ಷ 7 ಲಕ್ಷ ಟನ್‌ ಕೆಂಪು ಈರುಳ್ಳಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಅಧಿಕ ಉತ್ಪಾದನೆಯಿಂದಾಗಿ ಆಲೂಗೆಗಡ್ಡೆ ದರ ಕುಸಿದಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹಣಕಾಸಿನ ನೆರವು ಒದಗಿಸುವುದಕ್ಕಾಗಿ ₹240 ಕೋಟಿ ಮೊತ್ತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಕೃಷಿ ಸಚಿವ ರಾಘವ್‌ಜೀ ಪಟೇಲ್‌ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT