ಭಾನುವಾರ, ಜುಲೈ 25, 2021
21 °C
ಸಬರಮತಿ ಆಶ್ರಮ ಪುನರಾಭಿವೃದ್ಧಿ ಯೋಜನೆ

ಗಾಂಧಿ ಆಶ್ರಮ ಅಭಿವೃದ್ಧಿ: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಸಬರಮತಿ ಗಾಂಧಿ ಆಶ್ರಮದ ಅಭಿವೃದ್ದಿಗೆ ರೂಪಿಸ ಲಾಗಿರುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡುವ ನಿರ್ಣಯವನ್ನು ಅಂಗೀಕರಿ ಸುವಂತೆ ಗುಜರಾತ್‌ ಸರ್ಕಾರವು ಆಶ್ರಮಕ್ಕೆ ಸಂಬಂಧಿಸಿದ ಐದು ಟ್ರಸ್ಟ್‌ಗಳನ್ನು ಕೇಳಿದೆ.

ಮಹಾತ್ಮ ಗಾಂಧಿ ಅವರು ಸ್ಥಾಪಿಸಿದ ಸಬರಮತಿ ಆಶ್ರಮವನ್ನು ವಿಶ್ವ ದರ್ಜೆಯ ಸ್ಮಾರಕವನ್ನಾಗಿ ಪರಿವರ್ತಿಸುವ ಉದ್ದೇಶ ದಿಂದ, ಅಲ್ಲಿ ಅಭಿವೃದ್ಧಿ ಕಾರ್ಯಗಳ ಯೋಜನೆಯನ್ನು ಸರ್ಕಾರ ರೂಪಿಸಿದೆ.

ಸಂಬಂಧಿಸಿದ ಟ್ರಸ್ಟ್‌ಗಳು ತಮ್ಮ ಆಸ್ತಿ, ಚಟುವಟಿಕೆ, ನಿವಾಸಿಗಳು ಮತ್ತು ಇತರರ ಸಂಬಂಧಿತ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಗುರುವಾರ ಸಭೆ ಸೇರಿದ್ದ ಟ್ರಸ್ಟಿಗಳು ಆಶ್ರಮದ ಪುನರಾಭಿವೃದ್ದಿಗಾಗಿ ಸರ್ಕಾರ ಹೊಂದಿರುವ ಅಧಿಕೃತ ಯೋಜನೆಯ ಮಾಹಿತಿ ಒದಗಿ ಸುವಂತೆ ಕೋರಲು ನಿರ್ಧರಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು