ಭಾನುವಾರ, ಏಪ್ರಿಲ್ 11, 2021
22 °C

ಗುಜರಾತ್‌: ಚಿರತೆ ದಾಳಿಗೆ ಬಾಲಕಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಅಮ್ರೇಲಿ: ‘ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು 3 ವರ್ಷದ ಬಾಲಕಿಯ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ’ ಎಂದು ಅರಣ್ಯ ಅಧಿಕಾರಿಗಳು ಬುಧವಾರ ತಿಳಿಸಿದರು.

‘ಜಾಫ್ರಾಬಾದ್ ತಾಲ್ಲೂಕಿನ ಹೇಮಲ್ ಗ್ರಾಮದಲ್ಲಿ ರಾತ್ರಿ 9.30 ಕ್ಕೆ ಬಾಲಕಿ ತನ್ನ ಮನೆಯ ಮುಂದೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿ, ಆಕೆಯನ್ನು ಎಳೆದುಕೊಂಡು ಹೋಗಿದೆ’ ಎಂದು ಜಫ್ರಾಬಾದ್‌ನ ವಲಯ ಅರಣ್ಯ ಅಧಿಕಾರಿ ಜಿ.ಎನ್‌ ವಘೇಲಾ ಹೇಳಿದರು.

‘ಬಾಲಕಿಯ ರಕ್ಷಣೆಗಾಗಿ ಮನೆಯವರು ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಚಿರತೆ ಬಾಲಕಿಯ ಮೃತ ಶರೀರವನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ. ಸದ್ಯ ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈ ಘಟನೆಯ ಬಳಿಕ ಗ್ರಾಮದಲ್ಲಿ ಚಿರತೆಯನ್ನು ಸೆರೆಹಿಡಿಯಲು ಎರಡು ಬೋನುಗಳನ್ನುಇರಿಸಲಾಗಿದೆ. ಇನ್ನೂ ಹೆಚ್ಚಿನ ಪಂಜರಗಳನ್ನು ಇರಿಸುತ್ತೇವೆ’ ಎಂದು ಅವರು ಹೇಳಿದರು.

‘ಗುಜರಾತ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ ಚಿರತೆಗಳು 718 ಮಂದಿಯ ಮೇಲೆ ದಾಳಿ ನಡೆಸಿವೆ. ಇದರಲ್ಲಿ 67 ಜನರು ಮೃತಪಟ್ಟಿದ್ದಾರೆ’ ಎಂದು ರಾಜ್ಯದ ಅರಣ್ಯ ಸಚಿವ ಗಣಪತ್ ವಾಸವ ಅವರು ವಿಧಾನಸಭೆಯಲ್ಲಿ ತಿಳಿಸಿದ್ದರು.

‘ಅಮ್ರೇಲಿ, ಜುನಾಗಡ, ಗಿರ್‌ ಸೋಮನಾಥ್‌ ಮತ್ತು ದಹೋದ್‌ ಜಿಲ್ಲೆಗಳಲ್ಲೇ ಚಿರತೆ ಹಾವಳಿ ಅಧಿಕವಾಗಿದೆ. ಒಟ್ಟು ಮೃತರಲ್ಲಿ 55 ಮಂದಿ ಈ ನಾಲ್ಕು ಜಿಲ್ಲೆಗಳಲ್ಲೇ ಸಂಭವಿಸಿದೆ. 2016ರ ಗಣತಿಯಂತೆ, ರಾಜ್ಯದಲ್ಲಿ 1,395 ಚಿರತೆಗಳಿವೆ. ಚಿರತೆಗಳ ಸಂಖ್ಯೆಯನ್ನು ನಿಯಂತ್ರಿಸಲು ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಅನುಮತಿ ನೀಡಬೇಕು ಎಂದು ರಾಜ್ಯವು ಕೇಂದ್ರವನ್ನು ಕೋರಿದೆ, ಆದರೆ ಅದಕ್ಕೆ ಇನ್ನೂ ಒಪ್ಪಿಗೆ ದೊರೆತಿಲ್ಲ’ ಎಂದು ಸಚಿವರು ಹೇಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು