ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಗಲಭೆ: ತೀಸ್ತಾ ಅರ್ಜಿ ಸೇರಿ 10 ಅರ್ಜಿ ‘ಸುಪ್ರೀಂ’ ವಿಲೇವಾರಿ

Last Updated 30 ಆಗಸ್ಟ್ 2022, 17:35 IST
ಅಕ್ಷರ ಗಾತ್ರ

ನವದೆಹಲಿ: 2002ರ ಗುಜರಾತ್‌ ಗಲಭೆಯ ಹಿಂಸಾಚಾರ ಪ್ರಕರಣಗಳ ಸೂಕ್ತ ತನಿಖೆಗೆ ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಲ್ಲಿಸಿದ್ದ ಮನವಿ ಸೇರಿ ಹತ್ತು ಅರ್ಜಿಗಳನ್ನುಸುಪ್ರೀಂಕೋರ್ಟ್‌ ಮಂಗಳವಾರ ವಿಲೇವಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಮತ್ತು ನ್ಯಾಯಮೂರ್ತಿ ಎಸ್‌. ರವೀಂದ್ರ ಭಟ್‌ ಹಾಗೂ ಜೆ.ಬಿ. ಪಾರ್ದೀವಾಲ ಅವರಿದ್ದ ಪೀಠವು, ಈ ಪ್ರಕರಣಗಳನ್ನು ನಿರರ್ಥಕವೆಂದು ಪರಿಗಣಿಸಿ ವಿಲೇಮಾಡಿದೆ.
ಸಿಟಿಜನ್ಸ್‌ ಫಾರ್‌ ಪೀಸ್‌ ಆ್ಯಂಡ್‌ ಜಸ್ಟೀಸ್‌ ಸರ್ಕಾರೇತರ ಸಂಸ್ಥೆಯತೀಸ್ತಾ ಸೆಟಲ್‌ವಾಡ್‌ ಅವರು ಗುಜರಾತ್‌ ಗಲಭೆ ಪ್ರಕರಣಗಳ ಸೂಕ್ತ ತನಿಖೆ ನಡೆಸುವಂತೆ ಮತ್ತು ತಮಗೆ ರಕ್ಷಣೆ ಕೋರಿವಕೀಲೆ ಅಪರ್ಣಾ ಭಟ್‌ ಮೂಲಕ ಅರ್ಜಿ ಸಲ್ಲಿಸಿದ್ದರು.
ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದ ಒಂಬತ್ತು ಪ್ರಕರಣಗಳ ತನಿಖೆಗೆ ಉನ್ನತ ನ್ಯಾಯಾಲಯ ರಚಿಸಿದ್ದ ಎಸ್‌ಐಟಿ, ಎಂಟು ಪ್ರಕರಣಗಳ ತನಿಖೆ ಪೂರ್ಣಗೊಳಿಸಿದೆ. ಉಳಿದ ಒಂದು ಪ್ರಕರಣದ ಅಂತಿಮ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಪೀಠ ಹೇಳಿದೆ.
ತೀಸ್ತಾ ರಕ್ಷಣೆಗೆ ಕೋರಿದ್ದ ಅರ್ಜಿಯನ್ನು ಪೀಠವು ವಿಚಾರಣೆಗೆ ಬಾಕಿ ಇರಿಸಿ, ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ತೀಸ್ತಾ ಅವರಿಗೆ ಅವಕಾಶ ನೀಡಿದೆ.

ಎಸ್‌ಐಟಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟಗಿ, ಒಂಬತ್ತು ಪ್ರಕರಣಗಳಲ್ಲಿ ನರೋಡಾ ಗಾಂವ್ ಪ್ರದೇಶದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಅಂತಿಮ ವಾದದ ಹಂತದಲ್ಲಿ ಬಾಕಿ ಇದೆ. ಇತರ ಪ್ರಕರಣಗಳ ವಿಚಾರಣೆಗಳು ಪೂರ್ಣಗೊಂಡಿವೆ. ಆ ಪ್ರಕರಣಗಳು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿವೆ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು.
ಸೆ. 1ಕ್ಕೆ ತೀಸ್ತಾ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: 2002ರ ಗುಜರಾತ್‌ ಗಲಭೆಯ ಹಿಂಸಾಚಾರ ಪ್ರಕರಣಗಳ ಸೂಕ್ತ ತನಿಖೆಗೆ ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಲ್ಲಿಸಿದ್ದ ಮನವಿ ಸೇರಿ ಹತ್ತು ಅರ್ಜಿ ಗಳನ್ನುಸುಪ್ರೀಂಕೋರ್ಟ್‌ ಮಂಗಳವಾರ ವಿಲೇವಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಮತ್ತು ನ್ಯಾಯಮೂರ್ತಿ ಎಸ್‌. ರವೀಂದ್ರ ಭಟ್‌ ಹಾಗೂ ಜೆ.ಬಿ. ಪಾರ್ದೀವಾಲ ಅವರಿದ್ದ ಪೀಠವು, ಈ ಪ್ರಕರಣಗಳನ್ನು ನಿರರ್ಥಕವೆಂದು ಪರಿಗಣಿಸಿ ವಿಲೇಮಾಡಿದೆ.

ಸಿಟಿಜನ್ಸ್‌ ಫಾರ್‌ ಪೀಸ್‌ ಆ್ಯಂಡ್‌ ಜಸ್ಟೀಸ್‌ ಸರ್ಕಾರೇತರ ಸಂಸ್ಥೆಯತೀಸ್ತಾ ಸೆಟಲ್‌ವಾಡ್‌ ಅವರು ಗುಜರಾತ್‌ ಗಲಭೆ ಪ್ರಕರಣಗಳ ಸೂಕ್ತ ತನಿಖೆ ನಡೆಸುವಂತೆ ಮತ್ತು ತಮಗೆ ರಕ್ಷಣೆ ಕೋರಿವಕೀಲೆ ಅಪರ್ಣಾ ಭಟ್‌ ಮೂಲಕ ಅರ್ಜಿ ಸಲ್ಲಿಸಿದ್ದರು.

ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದ ಒಂಬತ್ತು ಪ್ರಕರಣಗಳ ತನಿಖೆಗೆ ಉನ್ನತ ನ್ಯಾಯಾಲಯ ರಚಿಸಿದ್ದ ಎಸ್‌ಐಟಿ, ಎಂಟು ಪ್ರಕರಣಗಳ ತನಿಖೆ ಪೂರ್ಣಗೊಳಿಸಿದೆ. ಉಳಿದ ಒಂದು ಪ್ರಕರಣದ ಅಂತಿಮ ವಾದ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಪೀಠ ಹೇಳಿದೆ.

ತೀಸ್ತಾ ರಕ್ಷಣೆಗೆ ಕೋರಿದ್ದ ಅರ್ಜಿಯನ್ನು ಪೀಠವು ವಿಚಾರಣೆಗೆ ಬಾಕಿ ಇರಿಸಿ, ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ತೀಸ್ತಾ ಅವರಿಗೆ ಅವಕಾಶ ನೀಡಿದೆ.

ಎಸ್‌ಐಟಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟಗಿ, ಒಂಬತ್ತು ಪ್ರಕರಣಗಳಲ್ಲಿ ನರೋಡಾ ಗಾಂವ್ ಪ್ರದೇಶದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಅಂತಿಮ ವಾದದ ಹಂತದಲ್ಲಿ ಬಾಕಿ ಇದೆ.

ಇತರ ಪ್ರಕರಣಗಳ ವಿಚಾರಣೆಗಳು ಪೂರ್ಣಗೊಂಡಿವೆ. ಆ ಪ್ರಕರಣಗಳು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿವೆ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT