ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ ವರದಿ ಸೋರಿಕೆ; ನ್ಯಾಯಾಲಯ ಕಮಿಷನರ್ ವಜಾ

ಜ್ಞಾನವಾಪಿ ಮಸೀದಿ ವಿಡಿಯೊ ಸಮೀಕ್ಷೆ ವರದಿ ಸೋರಿಕೆ
Last Updated 17 ಮೇ 2022, 18:27 IST
ಅಕ್ಷರ ಗಾತ್ರ

ಲಖನೌ: ಜ್ಞಾನವಾಪಿ ಮಸೀದಿಯ ಒಳಭಾಗದ ವಿಡಿಯೊ ಸಮೀಕ್ಷೆಗಾಗಿ ನೇಮಿಸಲಾಗಿದ್ದ ನ್ಯಾಯಾಲಯ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ವಾರಾಣಸಿ ನ್ಯಾಯಾಲಯವು ಮಂಗಳವಾರ ವಜಾ ಮಾಡಿದೆ. ಸಮೀಕ್ಷೆಯ ವಿವರಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ, ಅವರ ವಿರುದ್ಧ ನ್ಯಾಯಾಲಯವು ಈ ಕ್ರಮ ತೆಗದುಕೊಂಡಿದೆ. ಜತೆಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಇನ್ನೂ 2 ದಿನ ಕಾಲಾವಕಾಶ ನೀಡಿದೆ.

ವಿಡಿಯೊ ಸಮೀಕ್ಷೆಯ ವರದಿಯನ್ನು ಮಂಗಳವಾರ ಸಲ್ಲಿಸಬೇಕು ಎಂದು ವಾರಾಣಸಿ ನ್ಯಾಯಾಲಯವು ಈ ಹಿಂದೆ ಸೂಚಿಸಿತ್ತು. ಆದರೆ ವರದಿ ಸಲ್ಲಿಕೆಗೂ ಮುನ್ನವೇ, ಮಸೀದಿಯ ಒಳಭಾಗದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಕೆಲವು ಹಿಂದೂ ವಕೀಲರು ಸೋಮವಾರವೇ ಹೇಳಿದ್ದರು. ಈ ಬಗ್ಗೆ ವಾರಾಣಸಿ ನ್ಯಾಯಾಲಯವು ಮಂಗಳವಾರದ ವಿಚಾರಣೆ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ‘ಅಜಯ್ ಕುಮಾರ್ ಮಿಶ್ರಾ ಅವರು ನಿಯೋಜಿಸಿದ್ದ ಕ್ಯಾಮೆರಾಮನ್, ವಿಡಿಯೊ ಸಮೀಕ್ಷೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಇದು ನ್ಯಾಯಾಂಗ ಘನತೆಗೆ ವಿರುದ್ಧವಾದುದು. ಈ ಕಾರಣದಿಂದ ಅಜಯ್ ಕುಮಾರ್ ಮಿಶ್ರಾ ಅವರನ್ನು ನ್ಯಾಯಾಲಯ ಕಮಿಷನರ್ ಹುದ್ದೆಯಿಂದ ತಕ್ಷಣವೇ ವಜಾ ಮಾಡಲಾಗಿದೆ’ ಎಂದು ಹೇಳಿತು.ವಿಡಿಯೊ ಸಮೀಕ್ಷೆ ಆಯೋಗದ ಕಮಿಷನರ್ ಆಗಿ ವಿಶಾಲ್ ಸಿಂಗ್ ಅವರನ್ನು ನೇಮಕ ಮಾಡಿತು.

‘ಸಮೀಕ್ಷೆ ವೇಳೆ ನೂರಾರು ಚಿತ್ರಗಳನ್ನು ತೆಗೆಯಲಾಗಿದೆ ಮತ್ತು ವಿಡಿಯೊ ಹಲವು ಗಂಟೆಗಳಷ್ಟು ದೀರ್ಘ
ವಾಗಿದೆ. ಹೀಗಾಗಿ ವರದಿ ಸಿದ್ಧಪಡಿಸಲು ಮತ್ತಷ್ಟು ಸಮಯ ಬೇಕು’ ಎಂದು ಆಯೋಗವು ನ್ಯಾಯಾಲಯದ ಎದುರು ಮನವಿ ಮಾಡಿಕೊಂಡಿತು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯವು, ವರದಿ ಸಲ್ಲಿಸಲು ಇನ್ನೂ ಎರಡು ದಿನ ಸಮಯ ನೀಡಿತು.

ನ್ಯಾಯಾಲಯ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿ ತೋರಿದ್ದಾರೆವಾರಾಣಸಿ ನ್ಯಾಯಾಲಯ

* ನಾನು ಪಕ್ಷಾತೀತವಾಗಿ ಕೆಲಸ ಮಾಡಿದ್ದೆ. ಆದರೆ ನಾನು ನಿಯೋಜನೆ ಮಾಡಿದ್ದ ಕ್ಯಾಮೆರಾಮನ್ ನನಗೆ ಮೋಸ ಮಾಡಿದ. ಆದರೆ ನಾನು ಶಿಕ್ಷೆ ಅನುಭವಿಸಿದೆ.

-ಅಜಯ್ ಕುಮಾರ್ ಮಿಶ್ರಾ, ವಜಾಗೊಂಡ ಕಮಿಷನರ್

* ವಿಡಿಯೊ ಸಮೀಕ್ಷೆಯ ವಿವರಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ ಎರಡು ದಿನಗಳಲ್ಲಿ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ನೀಡುತ್ತೇನೆ.

-ವಿಶಾಲ್ ಸಿಂಗ್, ನೂತನ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT