ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

HAL ನ ಶೇ 3.5ರಷ್ಟು ಷೇರು ಮಾರಾಟ: ಕೇಂದ್ರದ ಬೊಕ್ಕಸಕ್ಕೆ ₹ 2,867 ಕೋಟಿ ನಿರೀಕ್ಷೆ

Last Updated 22 ಮಾರ್ಚ್ 2023, 14:39 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲದ ಬಾಹ್ಯಾಕಾಶ ಹಾಗೂ ರಕ್ಷಣಾ ಕಪನಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಲ್‌) ನ ಶೇ 3.5 ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ‘ರಾಯಿಟರ್ಸ್‌‘ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದೇ ವಾರದಲ್ಲಿ ಎಎಚ್‌ಎಲ್‌ನ ಷೇರು ವಿಕ್ರಯ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 2,867 ಕೋಟಿ ಸೇರಲಿದೆ.

ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಲಾದ ದಾಖಲೆಯೊಂದರಿಂದ ಈ ವಿಷಯ ಗೊತ್ತಾಗಿದೆ.

ಕೇಂದ್ರ ಸರ್ಕಾರ ಆರಂಭಿಸಿರುವ ಸರ್ಕಾರಿ ಒಡೆತನದ ಕಂಪನಿಗಳ ಷೇರು ಮಾರಾಟ ಯೋಜನೆಯ ಭಾಗವಾಗಿ ಎಎಚ್‌ಎಲ್‌ನ ಷೇರುಗಳನ್ನು ವಿಕ್ರಯ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರು ವಿಕ್ರಯದಿಂದ ಕೇಂದ್ರ ಸರ್ಕಾರಕ್ಕೆ ₹ 31,110 ಕೋಟಿ ಹರಿದು ಬಂದಿದ್ದು, ಮಾರ್ಚ್‌ 31ರ ವೇಳೆಗೆ ₹ 50,000 ಕೋಟಿ ಮುಟ್ಟುವ ಗುರಿ ಹಾಕಿಕೊಂಡಿದೆ.

ಸದ್ಯ ಸರ್ಕಾರವು ಎಚ್‌ಎಎಲ್‌ನಲ್ಲಿ ಶೇ 75.15 ರಷ್ಟು ಪಾಲು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT