ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನ ಅತ್ಯಾಧುನಿಕ ಎಎಲ್‌ಹೆಚ್ ಎಂಕೆ -3 ಹೆಲಿಕಾಪ್ಟರ್‌ ನೌಕಾಪಡೆಗೆ ಸೇರ್ಪಡೆ

Last Updated 12 ಜೂನ್ 2021, 13:54 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ವಲಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸಿರುವ ಮೂರು ಸುಧಾರಿತ ಲೈಟ್ ಹೆಲಿಕಾಪ್ಟರ್‌ ಎಎಲ್‌ಹೆಚ್ ಎಂಕೆ -3 ಅನ್ನು ಭಾರತೀಯ ನೌಕಾ ಪಡೆಗೆ ಸೇರ್ಪಡೆ ಮಾಡಲಾಗಿದೆ.

ಎಎಲ್‌ಹೆಚ್ ಎಂಕೆ -3 ಪ್ರೋಗ್ರಾಂನ ಭಾಗವಾಗಿರುವ ಈ ಹೆಲಿಕಾಪ್ಟರ್‌ಗಳನ್ನು ಭುವನೇಶ್ವರ, ಪೋರ್‌ಬಂದರ್, ಚೆನ್ನೈ ಮತ್ತು ಕೊಚ್ಚಿಯಲ್ಲಿ ಇರಿಸಲಾಗುವುದು ಮತ್ತು ಇವು ವಿವಿಧ ಕೋಸ್ಟ್ ಗಾರ್ಡ್ ಏವಿಯೇಷನ್ ಸ್ಕ್ವಾಡ್ರನ್‌ಗಳ ಭಾಗವಾಗಲಿವೆ ಎಂದು ಎಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ದೆಹಲಿಯ ಭಾರತೀಯ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಯಲ್ಲಿ ಮತ್ತು ಬೆಂಗಳೂರಿನ ಎಚ್‌ಎಎಲ್‌ನ ಹೆಲಿಕಾಪ್ಟರ್ ಎಂಆರ್‌ಒ ವಿಭಾಗದಲ್ಲಿ ಏಕಕಾಲದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಅವರ ಸಮ್ಮುಖದಲ್ಲಿ ಈ ಹಸ್ತಾಂತರ ನಡೆದಿದೆ ಎಂದು ಅದು ಹೇಳಿದೆ.

ಈ ಸಂದರ್ಭದಲ್ಲಿ ಭಾರತೀಯ ಕೋಸ್ಟ್‌ಗಾರ್ಡ್‌ನ ಮಹಾನಿರ್ದೇಶಕ ಕೆ.ನಟರಾಜನ್ ಮತ್ತು ಸಿಎಮ್‌ಡಿ, ಎಚ್‌ಎಎಲ್‌ನ ಆರ್ ಮಾಧವನ್ ಉಪಸ್ಥಿತರಿದ್ದರು.

ಇಂದು ಹಸ್ತಾಂತರಿಸಲಾಗಿರುವ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಮುಂದಿನ ದಿನಗಳಲ್ಲಿ ಐಸಿಜಿಯ ಕಾರ್ಯಾಚರಣೆಯ ಸಾಮರ್ಥ್ಯಕ್ಕೆ ಮಹತ್ವದ ಬದಲಾವಣೆ ತರಲಿವೆ ಎಂದು ಅಜಯ್ ಕುಮಾರ್ ಹೇಳಿದರು. ‘ಸುಧಾರಿತ ಸಂವೇದಕಗಳನ್ನು ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಐಸಿಜಿಗೆ ಸವಾಲಿನ ಕಾರ್ಯಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತವೆ. ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾರ್ಯಕ್ಷಮತೆ ಆಧಾರಿತ ಲಾಜಿಸ್ಟಿಕ್ಸ್ ಅನ್ನು ಪರಿಚಯಿಸಲಾಗುತ್ತಿದೆ, ಇದು ಆಧುನಿಕ ನಿರ್ವಹಣಾ ಅಭ್ಯಾಸವಾಗಿದ್ದು, ಕಾರ್ಯಾಚರಣೆಯ ಮತ್ತು ನಿರ್ವಹಣೆ ದಕ್ಷತೆ ಹೆಚ್ಚಿಸುತ್ತದೆ, ’ ಎಂದು ಅವರು ಹೇಳಿದರು.

ಈ ಹೆಲಿಕಾಪ್ಟರ್‌ಗಳಲ್ಲಿ ಅತ್ಯಾಧುನಿಕ ಉಪಕರಣಗಳಾದ ಕಣ್ಗಾವಲು ರಾಡಾರ್, ಎಲೆಕ್ಟ್ರೋ ಆಪ್ಟಿಕ್ ಪಾಡ್, ವೈದ್ಯಕೀಯ ತೀವ್ರ ನಿಗಾ ಘಟಕ, ಹೈ ಇಂಟೆನ್ಸಿಟಿ ಸರ್ಚ್ ಲೈಟ್, ಎಸ್‌ಎಆರ್ ಹೋಮರ್, ಲೌಡ್ ಹೇಲರ್, ಮೆಷಿನ್ ಗನ್ ಹೊಂದಿದ್ದು, ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಬಹುದಾಗಿದೆ ಎಂದು ಎಚ್‌ಎಎಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT