ಭಾನುವಾರ, ಏಪ್ರಿಲ್ 18, 2021
24 °C

ಚಲಿಸುತ್ತಿದ್ದ ಆಟೋದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಹಿಸ್ಸಾರ್: ಹಿಸ್ಸಾರ್-ದೆಹಲಿ ಬೈಪಾಸ್ ರಸ್ತೆಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಆಟೋದಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ. 

ಬೈಪಾಸ್ ರಸ್ತೆಯಲ್ಲಿರುವ ತನ್ನ ಶಿಕ್ಷಣ ಸಂಸ್ಥೆಗೆ ಹೋಗಲು ಸಂತ್ರಸ್ತೆಯು ಇಲ್ಲಿರುವ ಕೆಂಚಿ ಚೌಕ್‌ನಿಂದ ಆಟೋರಿಕ್ಷಾ ಹತ್ತಿದಾಗ ಈ ಘಟನೆ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್‌ ಅನ್ನು ತಲುಪಿದರೂ ಕೂಡ ಚಾಲಕ ಆಟೋವನ್ನು ಚಾಲನೇ ಮಾಡುತ್ತಲೇ ಇದ್ದ. ಈ ವೇಳೆ ಆತ ಮತ್ತು ಆತನ ಸಹಚರರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಗನ್‌ಮ್ಯಾನ್‌ ಅದೇ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ಆಟೋದಲ್ಲಿದ್ದ ವಿದ್ಯಾರ್ಥಿನಿಯ ಕೂಗು ಕೇಳಿಬಂದಿದೆ. ಬಳಿಕ ಆಕೆಯನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಆರೋಪಿಗಳನ್ನು ಶಿವನಗರದ ವಿನೋದ್ ಮತ್ತು ಇಲ್ಲಿನ ಭೈನಿ ಅಮೀರ್‌ಪುರ ಗ್ರಾಮದ ನಿವಾಸಿ ನವೀನ್ ಎಂದು ಗುರುತಿಸಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು