ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ ಸರ್ಕಾರ ಜಾಹಿರಾತಿಗಾಗಿ ಖರ್ಚು ಮಾಡಿದ್ದು ಬರೋಬ್ಬರಿ ₹ 700 ಕೋಟಿ!

Last Updated 18 ಡಿಸೆಂಬರ್ 2021, 3:19 IST
ಅಕ್ಷರ ಗಾತ್ರ

ಚಂಡೀಗಡ: 2015 ರಿಂದೇಚೆಗೆ ತನ್ನ ಸಾಧನೆ, ಘೋಷಣೆಗಳು ಮತ್ತು ಯೋಜನೆಗಳನ್ನು ವಿವರಿಸುವ ಸಲುವಾಗಿ ಹರಿಯಾಣದ ಬಿಜೆಪಿ ಸರ್ಕಾರವು ಜಾಹಿರಾತಿಗಾಗಿ ₹ 700 ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ.

ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ ಕೇಳಿದ ಪ್ರಶ್ನೆಗೆ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಸರ್ಕಾರ ಮಾಹಿತಿ ನೀಡಿದೆ.

2015 ರಿಂದ ಸರ್ಕಾರವು ತನ್ನ ಸಾಧನೆಗಳು, ಪ್ರಕಟಣೆಗಳು, ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಮತ್ತು ಯೋಜನೆಗಳ ಜಾಹೀರಾತುಗಳಿಗಾಗಿ ಪತ್ರಿಕೆಗಳು, ಬ್ಯಾನರ್‌ಗಳು, ಇಂಟರ್ನೆಟ್, ಟಿವಿ ಮತ್ತು ರೇಡಿಯೊ ಇತ್ಯಾದಿಗಳಿಗೆ ಪ್ರತಿವರ್ಷ ಖರ್ಚು ಮಾಡಿದ ಮೊತ್ತದ ಕುರಿತು ವಿವರ ನೀಡುವಂತೆ ಅಹ್ಮದ್ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರವಾಗಿ, ಲಿಖಿತ ಉತ್ತರದಲ್ಲಿ ಸರ್ಕಾರ ಜನವರಿ 2015 ರಿಂದ ಡಿಸೆಂಬರ್ 13, 2021ರ ಅವಧಿಯ ಮಾಹಿತಿಯನ್ನು ನೀಡಿದೆ.

ಈ ಅವಧಿಯಲ್ಲಿ ಪತ್ರಿಕೆಗಳ ಜಾಹೀರಾತಿಗಾಗಿ ₹ 596 ಕೋಟಿ, ಟಿವಿ ಜಾಹೀರಾತುಗಳಿಗೆ ₹ 96.34 ಕೋಟಿ, ರೇಡಿಯೋಗೆ ₹ 21.76 ಕೋಟಿ, ಇಂಟರ್‌ನೆಟ್‌ಗೆ ₹ 1.19 ಕೋಟಿ ಮತ್ತು ಬ್ಯಾನರ್‌ಗಳಿಗೆ ₹ 4.39 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT