ಬುಧವಾರ, ಡಿಸೆಂಬರ್ 8, 2021
23 °C

ಕೃಷಿ ಕಾಯ್ದೆ ವಿರುದ್ಧ ಧರಣಿ: ಟಿಕ್ರಿ ಗಡಿ ಬಳಿ ಲಾರಿ ಹರಿದು 3 ರೈತ ಮಹಿಳೆಯರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಬಹದೂರ್‌ಗಡ (ಹರಿಯಾಣ): ಕೃಷಿ ಕಾಯ್ದೆಗಳ ವಿರುದ್ಧ ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮೂರಿಗೆ ತೆರಳುತ್ತಿದ್ದ ರೈತ ಮಹಿಳೆಯರ ಮೇಲೆ ಲಾರಿಯೊಂದು ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ  ಘಟನೆ ಇಲ್ಲಿನ ಪಕೋಡಾ ಚೌಕದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಮಹಿಳೆಯರು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ಹೊರಟಿದ್ದರು. ಬಹದೂರ್‌ಗಡ ರೈಲ್ವೆ ನಿಲ್ದಾಣಕ್ಕೆ ತೆರಳಲು ಪಕೋಡಾ ಚೌಕದ ಬಳಿ ಆಟೊ ರಿಕ್ಷಾಗಾಗಿ ಕಾಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ, ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಛಿಂದೇರ್ ಕೌರ್(60), ಅಮರ್ಜೀತ್ ಕೌರ್(58) ಮತ್ತು ಗೌರಮೈಲ್ ಕೌರ್(60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಾನ್ಸಾ ಜಿಲ್ಲೆಯ ಖೀವಾ ದ್ಯಾಲುವಾಲಾ ಹಳ್ಳಿಯವರು. ಗಾಯಗೊಂಡ ಮಹಿಳೆಯರನ್ನು ರೋಹ್ಟಕ್‌ನ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು