ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್‌ ಯಾತ್ರೆಗೆ ಸಿದ್ಧತೆ ಪೂರ್ಣ, ಯಾತ್ರಾ ವಿಧಾನ ನಿರ್ಧಾರ ನಮ್ಮದಲ್ಲ: ನಖ್ವಿ

Last Updated 5 ಏಪ್ರಿಲ್ 2022, 15:18 IST
ಅಕ್ಷರ ಗಾತ್ರ

ನವದೆಹಲಿ: ಹಜ್‌ ಯಾತ್ರೆಗಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರ ಕೈಗೊಂಡಿದೆ. ಆದರೆ, ಯಾತ್ರಾ ವಿಧಾನದ ಬಗ್ಗೆ ಸೌದಿ ಅರೇಬಿಯಾ ನಿರ್ಧಾರ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

ಕೋವಿಡ್‌ ಸಾಂಕ್ರಾಮಿಕದಿಂದಾಗಿಕಳೆದ ಎರಡು ವರ್ಷ ಅಂತರರಾಷ್ಟ್ರೀಯ ಹಜ್ ಯಾತ್ರೆ ನಡೆದಿಲ್ಲ. 2022ರಲ್ಲಿ ಹಜ್ ಯಾತ್ರೆ ಪುನರಾರಂಭದ ದಿನಾಂಕವನ್ನು ದೃಢಪಡಿಸುವಂತೆ ಟಿಎಂಸಿ ನಾಯಕ ನದೀಮುಲ್‌ ಹಕ್‌ ಅವರುಶೂನ್ಯ ಅವಧಿಯಲ್ಲಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ನಖ್ವಿ,‘ಹಜ್‌ ಯಾತ್ರೆಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಸರ್ಕಾರ ಮಾಡಿದೆ. ಆದರೆ, ಭಾರತದಿಂದ ಹಜ್‌ ಯಾತ್ರೆಗೆ ತೆರಳಲು ಎಷ್ಟು ಜನರಿಗೆ ಅವಕಾಶವಿದೆ ಎಂಬ ವಿಷಯ ಸೇರಿದಂತೆ ಇತರ ಅಂಶಗಳ ಬಗ್ಗೆ ಸೌದಿ ಅರೇಬಿಯಾ ನಿರ್ಧಾರ ಕೈಗೊಳ್ಳಬೇಕಾಗಿದೆ. ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಹಜ್‌ ಯಾತ್ರೆಗೆ ತೆರಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT