ಗುರುವಾರ , ಅಕ್ಟೋಬರ್ 29, 2020
19 °C

ಭಿವಂಡಿ ಕಟ್ಟಡ ಕುಸಿತ ‘ಗಂಭೀರ ಪ್ರಕರಣ’: ಮುಂಬೈ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣವನ್ನು ‘ಇದೊಂದು ಗಂಭೀರ ಘಟನೆ’ ಎಂದು ಬಣ್ಣಿಸಿರುವ ಮುಂಬೈ ಹೈಕೋರ್ಟ್‌‌, ‘ಮುಂಬೈ ಮಹಾನಗರದಲ್ಲೂ ಇಂಥದ್ದೇ ಗಂಭೀರ ಸಮಸ್ಯೆಗಳಿವೆ’ ಎಂದು ಎಚ್ಚರಿಸಿದೆ.

ಭಿವಂಡಿ ಪವರ್‌ಲೂಮ್ ಟೌನ್‌ನಲ್ಲಿ ಕಟ್ಟಡ ಕುಸಿತ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ಮುಖ್ಯ ನಾಯಮೂರ್ತಿ ದೀಪಾಂಕರ್ ದತ್ತಾ ಅವರ ನೇತೃತ್ವದ ನ್ಯಾಯಪೀಠ, ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ, ಬೃಹನ್‌ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ, ಭಿವಂಡಿ–ನಿಝಾಂಪುರ ನಗರಸಭೆ, ಕಲ್ಯಾಣ್– ದೊಂಬಿವಿಲಿ, ಠಾಣೆ ಮತ್ತು ನವಿ ಮುಂಬೈನ ನಗರಸಭೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದೆ. 

ಕಲ್ಯಾಣ್‌–ದೊಂಬಿವಿಲಿಯ ಕಟ್ಟಡ ನಿರ್ಮಾಣ ಪ್ರಕರಣವೊಂದರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಅವರು 40 ಮಂದಿಯನ್ನು ಬಲಿತೆಗೆದುಕೊಂಡ ಭಿವಂಡಿ ಕಟ್ಟಡ ಕುಸಿತ ಪ್ರಕರಣ ಒಂದು ಗಂಭೀರ ಘಟನೆಯಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು