ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ವಿಸ್ತಾ ನಿರ್ಮಾಣ ಕಾರ್ಯ: ಸೋಮವಾರ ಹೈಕೋರ್ಟ್ ತೀರ್ಪು

Last Updated 30 ಮೇ 2021, 5:56 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಪಿಡುಗಿನ ಸಂದರ್ಭದಲ್ಲಿ ‘ಸೆಂಟ್ರಲ್‌ ವಿಸ್ತಾ’‌ ಯೋಜನೆಯ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಲಿದೆ.

ಪಿಡುಗಿನ ಸಮಯದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರ ನ್ಯಾಯಪೀಠವು ಇದೇ 31ರಂದು ತೀರ್ಪು ನೀಡಲು ನಿರ್ಧರಿಸಿದೆ. ಈ ಕುರಿತು ಹೈಕೋರ್ಟ್‌ ಶನಿವಾರ ಪಟ್ಟಿ ಸಿದ್ಧಪಡಿಸಿದೆ.

ಅರ್ಜಿದಾರರಾದ ಅನ್ಯ ಮಲ್ಹೋತ್ರಾ, ಸೊಹೇಲ್‌ ಹಾಶ್ಮಿ ಅವರು ಯೋಜನೆಯು ಅತ್ಯಗತ್ಯ ಚಟುವಟಿಕೆಯಲ್ಲ ಹಾಗೂ ಅದನ್ನುಸದ್ಯಕ್ಕೆ ತಡೆಹಿಡಿಯಬಹುದು ಎಂದು ವಾದಿಸಿದ್ದರು. ಈ ಕುರಿತ ತನ್ನ ತೀರ್ಪನ್ನು ಹೈಕೋರ್ಟ್‌ ಮೇ 17ರಂದು ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT