ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಎರಡನೇ ಡೋಸ್ ಪಡೆದ ಆರೋಗ್ಯ ಸಚಿವ ಹರ್ಷವರ್ಧನ್

Last Updated 30 ಮಾರ್ಚ್ 2021, 9:55 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಪತ್ನಿ ನೂತನ್ ಗೊಯೆಲ್ ಅವರು ಇಲ್ಲಿನ ಹಾರ್ಟ್ ಅಂಡ್‌ ಲಂಗ್ಸ್‌ ಆಸ್ಪತ್ರೆಯಲ್ಲಿ ಮಂಗಳವಾರ ‘ಕೋವಿಡ್‌ 19‘ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರು.

ಮೊದಲು ಪತ್ನಿ ನೂತನ್ ಅವರು ಕೋವಾಕ್ಸಿನ್ ಲಸಿಕೆ ತೆಗದುಕೊಂಡರು. ನಂತರ ಸಚಿವ ಹರ್ಷವರ್ಧನ್ ಲಸಿಕೆ ಹಾಕಿಸಿಕೊಂಡರು. ಇವರಿಬ್ಬರು ಮಾರ್ಚ್ 2 ರಂದು ಕೋವಾಕ್ಸಿನ್‌ ಲಸಿಕೆಯ ಮೊದಲ ಡೊಸೇಜ್ ತೆಗೆದುಕೊಂಡಿದ್ದರು.

ಕೇಂದ್ರ ಸರ್ಕಾರ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 45 ರಿಂದ 59 ವರ್ಷದೊಳಗಿರು ವವರಿಗೆ ಮಾರ್ಚ್‌ 1 ರಿಂದ ‘ಕೋವಿಡ್‌ 19‘ ಲಸಿಕೆ ಪಡೆಯಲು ಅನುಮತಿ ನೀಡಿತ್ತು.

ಲಸಿಕೆ ಪಡೆದ ನಂತರ ಮಾತನಾಡಿದ ಸಚಿವ ಹರ್ಷವರ್ಧನ್ಅ, ‘60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಲಸಿಕೆ ಹಾಕಿಸಿಕೊಳ್ಳಿ‘ ಎಂದು ಮನವಿ ಮಾಡಿದರು.

‘ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳು ಸುರಕ್ಷಿತವಾಗಿವೆ. ಎರಡೂ ಲಸಿಕೆಗಳು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಲಸಿಕೆಗಳಾಗಿವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT