ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ರೆಮ್‌ಡಿಸಿವಿರ್‌ ಪಡೆಯಬೇಡಿ: ಕೇಂದ್ರ ಆರೋಗ್ಯ ಸಚಿವಾಲಯ

ಪ್ರತ್ಯೇಕ ವಾಸವಾಗಿರುವ ಕೋವಿಡ್‌ ಸೋಂಕಿತರಿಗೆ ಪರಿಷ್ಕೃತ ನಿಯಮಾವಳಿಗಳು
Last Updated 29 ಏಪ್ರಿಲ್ 2021, 21:52 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ದೃಢಪಟ್ಟಿದ್ದರೂ, ರೋಗ ಲಕ್ಷಣಗಳು ಕಾಣಿಸದಿರುವಂಥವರು ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸಿದೆ.

ಮನೆಯಲ್ಲಿಯೇ ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳನ್ನು ಪಡೆಯುವುದು ಅಥವಾ ಸಂಗ್ರಹಿಸಿಟ್ಟುಕೊಳ್ಳಬಾರದು. ಆಸ್ಪತ್ರೆಯಲ್ಲಿ ಮಾತ್ರ ರೆಮ್‌ಡಿಸಿವಿರ್‌ ಪಡೆದುಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಏಳು ದಿನಗಳ ಬಳಿಕವೂ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. 60 ವರ್ಷಗಳ ಮೇಲ್ಪಟ್ಟ ರೋಗಿಗಳು ಮತ್ತು ಡಯಾಬಿಟಿಸ್‌, ಹೃದ್ರೋಗ ಸೇರಿದಂತೆ ಅನ್ಯಕಾಯಿಲೆಗಳು ಇರುವವರಿಗೆ ವೈದ್ಯಾಧಿಕಾರಿಯು ಸಮರ್ಪಕ ತಪಾಸಣೆ ನಡೆಸಿದ ಬಳಿಕವೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.

ಎಂಟು ಗಂಟೆಗಳ ಕಾಲ ಮಾಸ್ಕ್‌ ಬಳಸಿದ ಬಳಿಕ ಮತ್ತೆ ಉಪಯೋಗಿಸಬಾರದು. ಒಂದು ವೇಳೆ, ಅದಕ್ಕೂ ಮುನ್ನವೇ ಹಸಿಯಾಗಿದ್ದರೂ ಬಳಸಬಾರದು. ಇಂತಹ ಮಾಸ್ಕ್‌ಗಳನ್ನು ಎಸೆಯುವ ಮುನ್ನ ಕಡ್ಡಾಯವಾಗಿ ಸೋಡಿಯಂ ಹೈಪೊಕ್ಲೊರೈಟ್‌ ಹಾಕಿ ಸೋಂಕಿನಿಂದ ಮುಕ್ತಗೊಳಿಸಬೇಕು ಎಂದು ಸೂಚಿಸಲಾಗಿದೆ.

ಉಸಿರಾಟದ ತೊಂದರೆಯಾದರೂ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ವೈದ್ಯರ ನೆರವು ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಮತ್ತು ಜ್ವರ ಕಡಿಮೆಯಾದ ಮೂರು ದಿನಗಳ ನಂತರ ಕನಿಷ್ಠ 10 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕ ವಾಸ ಇರಬೇಕು ಎಂದು ಸೂಚಿಸಲಾಗಿದೆ.

ಮಾತ್ರೆಗಳಿಂದ ಜ್ವರ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ. ವೈದ್ಯರು ಇತರ ಔಷಧಗಳನ್ನು ಶಿಫಾರಸು ಮಾಡಬಹುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT