ಭಾನುವಾರ, ಸೆಪ್ಟೆಂಬರ್ 19, 2021
24 °C

ರಾಜಸ್ಥಾನ ಭಾರಿ ಮಳೆ: ರೈಲು ಸೇವೆ ವ್ಯತ್ಯಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ರಾಜಸ್ಥಾನದ ಪೂರ್ವ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.

ಮಳೆಯಿಂದಾಗಿ ಜೋಧಪುರ ವಲಯದ ಗುಧಾ ಮತ್ತು ಗೋವಿಂದಿ ಮಾರ್ವಾರ ರೈಲ್ವೆ ನಿಲ್ದಾಣದ ಹಳಿಗಳು ಹಾನಿಗೊಂಡಿದ್ದು, ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು.

ನಗೌರ್, ಬಾರನ್, ಜೈಪುರ, ಕರೌಲಿ, ಸಿಕಾರ್, ಅಲ್ವರ್, ಝುಂಝುನು ಮತ್ತು ಚುರು ಜಿಲ್ಲೆಗಳ ಕೆಲವೆಡೆ ಶನಿವಾರ ಬೆಳಗಿನವರೆಗೆ ಭಾರಿ ಮಳೆಯಾಗಿದೆ.

ಬಾರನ್‌‌ ಜಿಲ್ಲೆಯಲ್ಲಿ ಗರಿಷ್ಠ 304 ಮಿ.ಮೀ ಮಳೆ ದಾಖಲಾಗಿದ್ದು, ಟೋಂಕ್‌ ಪಟ್ಟಣದಲ್ಲಿ 192 ಮಿ.ಮೀ ಮಳೆ ದಾಖಲಾಗಿದೆ. ಬರಾನ್ ಮತ್ತು ಜಲ್ವಾರ್ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು